ಭಾರತೀಯ ಷೇರುಪೇಟೆಯು ಶುಕ್ರವಾರ ಕುಸಿತದ ಹಾದಿ ಮುಂದುವರಿಸಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 193 ಪಾಯಿಂಟ್ಸ್ ಕುಸಿದಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 61 ಪಾಯಿಂಟ್ಸ್ ಇಳಿಕೆಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.37ರಷ್ಟು ಅಥವಾ 193.09 ಪಾಯಿಂಟ್ಸ್ ಇಳಿಕೆಗೊಂಡು 52,375.85 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.39ರಷ್ಟು ಅಥವಾ 61.40 ಪಾಯಿಂಟ್ಸ್ ಕುಸಿದು 15666.50 ಪಾಯಿಂಟ್ಸ್ ಮುಟ್ಟಿದೆ.

ದಿನದ ವಹಿವಾಟು ಆರಂಭಗೊಂಡಾಗ 1053 ಷೇರುಗಳು ಏರಿಕೆಗೊಂಡರೆ, 725 ಷೇರುಗಳು ಕುಸಿದವು ಮತ್ತು 72 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಏರಿಕೆಗೊಂಡ ಷೇರುಗಳು:
ನಿಫ್ಟಿಯ ಅಗ್ರ ಗಳಿಕೆದಾರ ಈಚರ್ ಮೋಟಾರ್ಸ್‌ನ ಷೇರುಗಳು 23 ರೂ.ಗಳ ಏರಿಕೆ ಕಂಡು 2,752.25 ರೂ., ಟೆಕ್ ಮಹೀಂದ್ರಾ ಷೇರುಗಳು ಸುಮಾರು 6 ರೂ.ಗಳ ಲಾಭದೊಂದಿಗೆ 1,066.05 ರೂ., ದೇವಿ ಲ್ಯಾಬ್‌ನ ಷೇರು 20 ರೂ.ಗಳ ಏರಿಕೆ ಕಂಡು 4,530.00 ರೂ., ಜೆಎಸ್‌ಡಬ್ಲ್ಯೂ ಸ್ಟೀಲ್‌ನ ಷೇರುಗಳು ಸುಮಾರು 2 ರೂ.ಗಳ ಲಾಭದೊಂದಿಗೆ 670.50 ರೂ., ಎಸ್‌ಬಿಐ ಲೈಫ್‌ನ ಷೇರು ಸುಮಾರು 3 ರೂ.ಗಳ ಲಾಭದೊಂದಿಗೆ 1,024.95 ರೂ. ತಲುಪಿದೆ.
ಇಳಿಕೆಗೊಂಡ ಷೇರುಗಳು:
ಮಹೀಂದ್ರಾ ಮತ್ತು ಮಹೀಂದ್ರಾ ಷೇರುಗಳು 8 ರೂ. ಏರಿಕೆಗೊಂಡು 868.05 ರೂ . ಪ್ರಾರಂಭವಾಗಿದ್ದು, ಬಜಾಜ್ ಆಟೋ ಷೇರುಗಳು ಸುಮಾರು 45 ರೂ.ಗಳಷ್ಟು ಇಳಿಕೆಯಾಗಿ 4,032.35 ರೂ. , ಇಂಡಸ್‌ಇಂಡ್ ಬ್ಯಾಂಕ್ ಷೇರುಗಳು ಸುಮಾರು 10 ರೂ.ಗಳಷ್ಟು ಇಳಿಕೆಯಾಗಿ 1,035.80 ರೂ., ಶ್ರೀ ಸಿಮೆಂಟ್ ಷೇರುಗಳು 282 ರೂ.ಗಳ ಇಳಿಕೆ ಕಂಡು 27,299.95 ರೂ., ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಸುಮಾರು 1,507.50 ರೂ. ತಲುಪಿದೆ.


Click it and Unblock the Notifications