ವಿಶ್ವದಲ್ಲಿ ಏರುತ್ತಿರುವ ಕೊರೊನಾವೈರಸ್ ಹರಡುವಿಕೆ ಮತ್ತು ತೈಲ ಸಮರದಿಂದಾಗಿ ಷೇರುಪೇಟೆಯಲ್ಲಿ ತಲ್ಲಣ ಮುಂದುವರಿದಿದೆ. ಶುಕ್ರವಾರ (ಮಾರ್ಚ್ 14) ರಂದು ಏರಿಕೆ ದಾಖಲಿಸಿದ್ದ ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಸೋಮವಾರ ಆರಂಭದಲ್ಲೇ 2000 ಪಾಯಿಂಟ್ಸ್‌ವರೆಗೂ ಕುಸಿತ ಕಂಡಿತ್ತು. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 9500, ಸೂಚ್ಯಂಕಗಳ ಕೆಳಗೆ ಇಳಿದಿದೆ.
ರಾಷ್ಟ್ರೀಯ ಷೇರುಪೇಟೆ(ಎನ್‌ಎಸ್ಇ) ಸೂಚ್ಯಂಕ ನಿಫ್ಟಿ ಸೋಮವಾರ 460 ಪಾಯಿಂಟ್ಸ್ ಇಳಿಕೆಗೊಂಡು 9499.85 ಪಾಯಿಂಟ್ಸ್ ತಲುಪಿದೆ. ಈ ಮೂಲಕ 9,500 ಪಾಯಿಂಟ್ಸ್‌ಗಳಿಗಿಂತ ಕೆಳಗೆ ದಾಖಲಾಗಿದೆ. ಆರಂಭದಲ್ಲಿ 2,000 ಪಾಯಿಂಟ್ಸ್ ಇಳಿದು ಸ್ವಲ್ಪ ಚೇತರಿಕೆ ಕಂಡಿದ್ದು, 1661 ಪಾಯಿಂಟ್ಸ್ ಇಳಿಕೆಯ ಮೂಲಕ 32,431 ಅಂಶಗಳನ್ನು ತಲುಪಿದೆ.

ಇಂಡಸ್‌ಲ್ಯಾಂಡ್ ಬ್ಯಾಂಕ್, ಅದಾನಿ ಪೋರ್ಟ್ಸ್, ಐಸಿಐಸಿಐ ಬ್ಯಾಂಕ್, ಹೆಚ್‌ಡಿಎಫ್‌ಸಿ ಬ್ಯಾಂಕ್, ಎಸ್‌ಬಿಐ, ಬಜಾಜ್ ಫಿನಾನ್ಸ್, ಜೀ ಎಂಟರ್‌ಟೈನ್‌ಮೆಂಟ್ ಕಂಪನಿ ಷೇರುಗಳು 6 ಪರ್ಸೆಂಟ್‌ನಿಂದ 12 ಪರ್ಸೆಂಟ್‌ವರೆಗೂ ಇಳಿಕೆ ಕಂಡಿವೆ.
ಯೆಸ್ ಬ್ಯಾಂಕ್ ಮೇಲೆ ಎಸ್‌ಬಿಐ ಸೇರಿದಂತೆ ಹಲವಾರು ಬ್ಯಾಂಕ್‌ಗಳು ಸಾವಿರಾರು ಕೋಟಿ ಹೂಡಿಕೆ ಮಾಡುವುದಾಗಿ ಶನಿವಾರ ಘೋಷಣೆ ಮಾಡಿದ ಬಳಿಕ ಸೋಮವಾರ ಯೆಸ್ ಬ್ಯಾಂಕ್ ಷೇರುಗಳು 49.51 ಪರ್ಸೆಂಟ್ ಏರಿಕೆಗೊಂಡು 38.20 ರುಪಾಯಿ ತಲುಪಿದೆ. ಜೊತೆಗೆ ಡಾ. ರೆಡ್ಡಿ ಲ್ಯಾಬ್ಸ್, ಸನ್‌ಫಾರ್ಮಾ, ಬಿಪಿಸಿಎಲ್, ಟಿಸಿಎಸ್ ಕಂಪನಿ ಷೇರುಗಳು ಏರಿಕೆ ಕಂಡಿವೆ.


Click it and Unblock the Notifications