ಸೆನ್ಸೆಕ್ಸ್ 221 ಪಾಯಿಂಟ್ಸ್ ಇಳಿಕೆ: ನಿಫ್ಟಿ 14,800 ಮಟ್ಟಕ್ಕಿಂತ ಕುಸಿತ
ಭಾರತೀಯ ಷೇರುಪೇಟೆ ಸತತ ಎರಡನೇ ದಿನವೂ ಕುಸಿತದ ಮೂಲಕ ವಹಿವಾಟು ಆರಂಭಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 221 ಪಾಯಿಂಟ್ಸ್ ಇಳಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 83 ಪಾಯಿಂಟ್ಸ್ ಕುಸಿದಿದೆ.
ಏರುತ್ತಲೇ ಸಾಗಿದೆ ಪೆಟ್ರೋಲ್, ಡೀಸೆಲ್ ದರ: ಸತತ 3ನೇ ದಿನ ಹೆಚ್ಚಳ
ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ ಬೆಳಿಗ್ಗೆ 9.16ರ ಸುಮಾರಿಗೆ ಶೇಕಡಾ 0.45ರಷ್ಟು ಅಥವಾ 221.45 ಪಾಯಿಂಟ್ಸ್ ಇಳಿಕೆಗೊಂಡು 48940.36 ಪಾಯಿಂಟ್ಸ್ ತಲುಪಿದೆ. ಎನ್ಎಸ್ಇ ಸೂಚ್ಯಂಕ ನಿಫ್ಟಿ 50.30 ಪಾಯಿಂಟ್ಸ್ ಅಥವಾ ಶೇಕಡಾ 0.34ರಷ್ಟು ಕುಸಿದು 14800.36 ಪಾಯಿಂಟ್ಸ್ ಮುಟ್ಟಿದೆ.
ಇಂದು ಸುಮಾರು 1135 ಷೇರುಗಳು ಏರಿಕೆಗೊಂಡರೆ, 331 ಷೇರುಗಳು ಕುಸಿದವು ಮತ್ತು 64 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಏರಿಕೆಗೊಂಡ ಷೇರುಗಳು:
ಎನ್ಟಿಪಿಸಿ ಷೇರುಗಳು ಸುಮಾರು 3 ರೂ.ಗಳ ಏರಿಕೆ ಕಂಡು 115.55 ರೂ., ಐಒಸಿ ಷೇರುಗಳು ಸುಮಾರು 2 ರೂ.ಗಳ ಏರಿಕೆ ಕಂಡು 105.80 ರೂ., ಕೋಲ್ ಇಂಡಿಯಾ ಷೇರುಗಳು ಸುಮಾರು 3 ರೂಪಾಯಿ ಹೆಚ್ಚಾಗಿ 158.35 ರೂ., ಪವರ್ ಗ್ರಿಡ್ ಕಾರ್ಪೊರೇಶನ್ನ ಷೇರುಗಳು ಸುಮಾರು 4 ರೂ ಗಳಿಸಿ 227.20 ರೂ., ಒಎನ್ಜಿಸಿ ಷೇರುಗಳು ಸುಮಾರು 2 ರೂ.ಗಳಿಂದ 120.25 ರೂ. ತಲುಪಿದೆ.
ಇಳಿಕೆಗೊಂಡ ಷೇರುಗಳು:
ಎಚ್ಡಿಎಫ್ಸಿ ಷೇರು ಸುಮಾರು 42 ರೂ.ಗಳ ಕುಸಿತ ಕಂಡು 2,421.95 ರೂ., ಮಹೀಂದ್ರಾ ಮತ್ತು ಮಹೀಂದ್ರಾ ಷೇರುಗಳು ಸುಮಾರು 11 ರೂ.ಗಳನ್ನು ಕಳೆದುಕೊಂಡು 764.80 ರೂ., ಎಚ್ಯುಎಲ್ನ ಷೇರುಗಳು ಸುಮಾರು 22 ರೂ.ಗಳ ಕುಸಿತ ಕಂಡು 2,379.70 ರೂ., ಟಿಸಿಎಸ್ ಷೇರುಗಳು ಸುಮಾರು 28 ರೂ. ಇಳಿಕೆಗೊಂಡು 3,094.55 ರೂ., ಎಚ್ಡಿಎಫ್ಸಿ ಬ್ಯಾಂಕ್ ಷೇರುಗಳು ಸುಮಾರು 11 ರೂ. ಕಳೆದುಕೊಂಡು 1,393.00 ರೂ. ತಲುಪಿದೆ.