For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ 243 ಪಾಯಿಂಟ್ಸ್‌ ಕುಸಿತ: ನಿಫ್ಟಿ 63 ಪಾಯಿಂಟ್ಸ್‌ ಇಳಿಕೆ

|

ಭಾರತದಲ್ಲಿ ದಿನೇ ದಿನೇ ಕೋವಿಡ್-19 ಪಾಸಿಟಿವ್ ಪ್ರಕರಣಗಳ ಹೆಚ್ಚಳ ಒಂದೆಡೆಯಾದ್ರೆ, ಭಾರತೀಯ ಷೇರುಪೇಟೆ ಕುಸಿತ ಮಂಗಳವಾರವು ಮುಂದುವರಿದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 243 ಪಾಯಿಂಟ್ಸ್‌, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 63 ಪಾಯಿಂಟ್ಸ್ ಕುಸಿದಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ 243.62 ಪಾಯಿಂಟ್ ಅಥವಾ ಶೇಕಡಾ 0.51ರಷ್ಟು ಇಳಿಕೆಗೊಂಡು 47,705.80 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 63.10 ಪಾಯಿಂಟ್ ಅಥವಾ ಶೇಕಡಾ 0.44ರಷ್ಟು ಇಳಿಕೆಗೊಂಡು 14,296.40 ಪಾಯಿಂಟ್ಸ್‌ ತಲುಪಿದೆ.

ಸೆನ್ಸೆಕ್ಸ್ 243 ಪಾಯಿಂಟ್ಸ್‌ ಕುಸಿತ: ನಿಫ್ಟಿ 63 ಪಾಯಿಂಟ್ಸ್‌ ಇಳಿಕೆ

ಇಂದು ಸುಮಾರು 1,603 ಷೇರುಗಳು ಏರಿಕೆಗೊಂಡರೆ, 1,187 ಷೇರುಗಳು ಕುಸಿದವು, ಮತ್ತು 155 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಎನ್‌ಎಸ್‌ಇನಲ್ಲಿ ಅಲ್ಟ್ರಾಟೆಕ್ ಸಿಮೆಂಟ್, ಎಚ್‌ಡಿಎಫ್‌ಸಿ, ಎಚ್‌ಸಿಎಲ್ ಟೆಕ್ನಾಲಜೀಸ್, ಗ್ರೇಸಿಮ್ ಇಂಡಸ್ಟ್ರೀಸ್ ಮತ್ತು ಶ್ರೀ ಸಿಮೆಂಟ್‌ಗಳು ನಿಫ್ಟಿಯಲ್ಲಿ ಪ್ರಮುಖವಾಗಿ ನಷ್ಟ ಅನುಭವಿಸಿದ್ದು, ಡಾ. ರೆಡ್ಡಿ ಲ್ಯಾಬ್ಸ್‌, ಬಜಾಜ್ ಫಿನ್‌ಸರ್ವ್, ಎಚ್‌ಡಿಎಫ್‌ಸಿ ಲೈಫ್, ಬಜಾಜ್ ಫೈನಾನ್ಸ್ ಮತ್ತು ಬಜಾಜ್ ಆಟೋ ಲಾಭಗಳಿಸಿದ ಷೇರುಗಳಾಗಿವೆ.

ಆಟೋ ಮತ್ತು ಫಾರ್ಮಾ ಸೂಚ್ಯಂಕಗಳು ತಲಾ ಶೇಕಡಾ 1ರಷ್ಟು ಏರಿಕೆಯಾದರೆ, ಐಟಿ ಸೂಚ್ಯಂಕವು ಶೇಕಡಾ 1ಕ್ಕಿಂತ ಹೆಚ್ಚಾಗಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಕೊನೆಗೊಂಡಿತು.

ಇನ್ನು ದೇಶೀಯ ಷೇರು ಮಾರುಕಟ್ಟೆಯಲ್ಲಿ ಕಂಡುಬರುವ ಮಾರಾಟದ ಮಧ್ಯೆ ಭಾರತೀಯ ರೂಪಾಯಿ ಆರಂಭಿಕ ಲಾಭವನ್ನು ಕಳೆದುಕೊಂಡಿತು ಮತ್ತು ಪ್ರತಿ ಡಾಲರ್‌ಗೆ 74.88 ಕ್ಕೆ ತಲುಪಿದೆ.

English summary

Sensex Down 243 Points: Nifty Ends Below 14300

Sensex was down 243.62 points or 0.51% at 47,705.80, and the Nifty was down 63.10 points or 0.44% at 14,296.40
Story first published: Tuesday, April 20, 2021, 16:29 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X