ಭಾರತೀಯ ಷೇರುಪೇಟೆ ಬುಧವಾರ (ಮೇ 19) ಸಾಕಷ್ಟು ಏರಿಳಿತಗಳ ನಡುವೆ ಕುಸಿತಕ್ಕೆ ಸಾಕ್ಷಿಯಾಗಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 290 ಪಾಯಿಂಟ್ಸ್ ಕುಸಿತಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 15 ಸಾವಿರ ಗಡಿಯಲ್ಲಿ ನಿಂತಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 290.69 ಪಾಯಿಂಟ್ಸ್ ಅಥವಾ ಶೇಕಡಾ 0.58ರಷ್ಟು ಇಳಿಕೆಗೊಂಡು 49,902.64 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 77.90 ಪಾಯಿಂಟ್ಸ್ ಅಥವಾ ಶೇಕಡಾ 0.52ರಷ್ಟು ಕುಸಿದು 15,030.20 ಪಾಯಿಂಟ್ಸ್ ಮುಟ್ಟಿದೆ.

ಇಂದು ದಿನದ ವಹಿವಾಟು ಅಂತ್ಯಕ್ಕೆ 1743 ಷೇರುಗಳು ಏರಿಕೆಗೊಂಡರೆ, 1249 ಷೇರುಗಳು ಕುಸಿದವು ಮತ್ತು 166 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಟಾಟಾ ಮೋಟಾರ್ಸ್, ಎಚ್‌ಡಿಎಫ್‌ಸಿ, ಜೆಎಸ್‌ಡಬ್ಲ್ಯೂ ಸ್ಟೀಲ್, ಎಂ ಆಂಡ್ ಎಂ ಮತ್ತು ಬಜಾಜ್ ಫಿನ್‌ಸರ್ವ್ ನಿಫ್ಟಿಯಲ್ಲಿ ನಷ್ಟ ಅನುಭವಿಸಿದ ಪ್ರಮುಖ ಷೇರುಗಳಾಗಿದ್ದು, ಕೋಲ್ ಇಂಡಿಯಾ, ಸಿಪ್ಲಾ, ಸನ್ ಫಾರ್ಮಾ, ಯುಪಿಎಲ್ ಮತ್ತು ಐಒಸಿ ಏರಿಕೆಗೊಂಡಿವೆ.
ನಿಫ್ಟಿ ಫಾರ್ಮಾ ಸೂಚ್ಯಂಕವು ಶೇಕಡಾ 1 ರಷ್ಟು ಏರಿಕೆ ಕಂಡರೆ, ಲೋಹದ ಸೂಚ್ಯಂಕವು ಶೇಕಡಾ 1 ರಷ್ಟು ಕುಸಿದಿದೆ ಮತ್ತು ಆಟೊಮೊಬೈಲ್, ಬ್ಯಾಂಕ್ ಮತ್ತು ಇನ್ಫ್ರಾ ಷೇರುಗಳಲ್ಲಿ ಮಾರಾಟ ಕಂಡುಬಂದಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಕೊನೆಗೊಂಡಿವೆ.


Click it and Unblock the Notifications