ಭಾರತೀಯ ಷೇರುಪೇಟೆ ಸತತ ಏರಿಕೆಯ ನಡುವೆ ಬುಧವಾರ ಕುಸಿತದೊಂದಿಗೆ ದಿನದ ವಹಿವಾಟು ಕೊನೆಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 334 ಪಾಯಿಂಟ್ಸ್ ಕುಸಿದರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 104 ಪಾಯಿಂಟ್ಸ್ ಇಳಿಕೆಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇ. 0.64ರಷ್ಟು ಅಥವಾ 333.93 ಪಾಯಿಂಟ್ಸ್ ಇಳಿಕೆಗೊಂಡು 51,941.64 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇ. 0.67ರಷ್ಟು ಅಥವಾ 104.70 ಪಾಯಿಂಟ್ಸ್ ಕುಸಿದು 15,635.40 ಪಾಯಿಂಟ್ಸ್ ಮುಟ್ಟಿದೆ.

ದಿನದ ವಹಿವಾಟು ಅಂತ್ಯಕ್ಕೆ ಸುಮಾರು 1425 ಷೇರುಗಳು ಏರಿಕೆಗೊಂಡರೆ, 1697 ಷೇರುಗಳು ಕುಸಿದಿವೆ ಮತ್ತು 139 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಟಾಟಾ ಮೋಟಾರ್ಸ್, ಅದಾನಿ ಪೋರ್ಟ್ಸ್, ಶ್ರೀ ಸಿಮೆಂಟ್ಸ್, ಎಲ್ ಅಂಡ್ ಟಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಪ್ರಮುಖ ನಷ್ಟಗೊಂಡ ಷೇರುಗಳಾಗಿದ್ದು, ಪವರ್ ಗ್ರಿಡ್ ಕಾರ್ಪ್, ಎಸ್‌ಬಿಐ ಲೈಫ್ ಇನ್ಶುರೆನ್ಸ್, ಎನ್‌ಟಿಪಿಸಿ, ಟೈಟಾನ್ ಕಂಪನಿ ಮತ್ತು ಡಿವಿಸ್ ಲ್ಯಾಬ್ಸ್ ಏರಿಕೆಗೊಂಡಿವೆ.
ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಮಾರಾಟದ ಮಧ್ಯೆ ಭಾರತೀಯ ರೂಪಾಯಿ ಮೌಲ್ಯ ಪ್ರತಿ ಡಾಲರ್‌ಗೆ 72.97 ಕ್ಕೆ ತಲುಪಿದೆ.


Click it and Unblock the Notifications