For Quick Alerts
ALLOW NOTIFICATIONS  
For Daily Alerts

Closing Bell: ಸೆನ್ಸೆಕ್ಸ್‌ 337 ಪಾಯಿಂಟ್ಸ್ ಕುಸಿತ: 15 ಸಾವಿರ ಗಡಿಯಿಂದ ಕೆಳಗಿಳಿದ ನಿಫ್ಟಿ

|

ಭಾರತೀಯ ಷೇರುಪೇಟೆಯ ಕುಸಿತ ಸತತವಾಗಿ ಮುಂದುವರಿದಿದ್ದು, ಗುರುವಾರ (ಮೇ 20) ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 337 ಪಾಯಿಂಟ್ಸ್ ಕುಸಿತಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 15 ಸಾವಿರ ಗಡಿಯಿಂದ ಕೆಳಗಿಳಿದಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ ಶೇಕಡಾ 0.68ರಷ್ಟು ಅಥವಾ 337.78 ಪಾಯಿಂಟ್ಸ್‌ ಇಳಿಕೆಗೊಂಡು 49,564.86 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.83ರಷ್ಟು ಅಥವಾ 124.20 ಪಾಯಿಂಟ್ಸ್ ಇಳಿಕೆಗೊಂಡು 14906 ಪಾಯಿಂಟ್ಸ್‌ ಮುಟ್ಟಿದೆ.

Closing Bell: ಸೆನ್ಸೆಕ್ಸ್‌ 337 ಪಾಯಿಂಟ್ಸ್ ಕುಸಿತ

ದಿನದ ವಹಿವಾಟು ಅಂತ್ಯಕ್ಕೆ 1614 ಷೇರುಗಳು ಏರಿಕೆಗೊಂಡರೆ, 1397 ಷೇರುಗಳು ಕುಸಿದಿವೆ ಮತ್ತು 161 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಟಾಟಾ ಸ್ಟೀಲ್, ಹಿಂಡಾಲ್ಕೊ ಇಂಡಸ್ಟ್ರೀಸ್, ಕೋಲ್ ಇಂಡಿಯಾ, ಬ್ರಿಟಾನಿಯಾ ಇಂಡಸ್ಟ್ರೀಸ್ ಮತ್ತು ಒಎನ್‌ಜಿಸಿ ನಿಫ್ಟಿಯಲ್ಲಿ ಲಾಭಗಳಿಸಿದ ಷೇರುಗಳಾಗಿದ್ದು, ಎಂ ಅಂಡ್ ಎಂ, ಸಿಪ್ಲಾ, ಬಿಪಿಸಿಎಲ್, ಇಂಡಸ್ಇಂಡ್ ಬ್ಯಾಂಕ್ ಮತ್ತು ಟೈಟಾನ್ ಕಂಪನಿ ನಷ್ಟಗೊಂಡಿವೆ.

ಪಿಎಸ್‌ಯು ಬ್ಯಾಂಕ್ ಹೊರತುಪಡಿಸಿ ಉಳಿದೆಲ್ಲ ವಲಯ ಸೂಚ್ಯಂಕಗಳು ಕೆಂಪು ಬಣ್ಣದಲ್ಲಿ ಕೊನೆಗೊಂಡಿದ್ದು, ನಿಫ್ಟಿ ಮೆಟಲ್ ಸೂಚ್ಯಂಕವು ಶೇಕಡಾ 3 ಕ್ಕಿಂತಲೂ ಕಡಿಮೆಯಾಗಿದೆ.

English summary

Sensex Down 337 Points: Nifty Ends Below 15K

Sensex was down 337.78 points or 0.68% at 49,564.86, and the Nifty was down 124.20 points or 0.83% at 14,906.
Story first published: Thursday, May 20, 2021, 16:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X