ಭಾರತೀಯ ಷೇರುಪೇಟೆ ಮಂಗಳವಾರ ಏರಿಕೆಯ ಹಾದಿಯನ್ನು ಕೊನೆಗೊಳಿಸಿ ಕುಸಿತಕ್ಕೆ ಸಾಕ್ಷಿಯಾಗಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 340.60 ಪಾಯಿಂಟ್ಸ್ ಕುಸಿತಕ್ಕೊಳಗಾದರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 91 ಪಾಯಿಂಟ್ಸ್ ಇಳಿದಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.60ರಷ್ಟು ಅಥವಾ 341 ಪಾಯಿಂಟ್ಸ್ ಕುಸಿದು 49161 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ಶೇಕಡಾ 0.61ರಷ್ಟು ಅಥವಾ 91.6 ಪಾಯಿಂಟ್ಸ್ ಕುಸಿದು 14,850 ಪಾಯಿಂಟ್ಸ್ ಮುಟ್ಟಿದೆ.

ಇಂದು ಬ್ಯಾಂಕಿಂಗ್ ಮತ್ತು ಹಣಕಾಸು ಮತ್ತು ಐಟಿ ಷೇರುಗಳು ಒತ್ತಡಕ್ಕೆ ಒಳಗಾಗಿದ್ದರಿಂದ ನಿಫ್ಟಿ 14,900 ಮಟ್ಟಕ್ಕಿಂತ ಕುಸಿದಿದ್ದರಿಂದ, ಸೂಚ್ಯಂಕಗಳು ನಾಲ್ಕು ದಿನಗಳ ಗೆಲುವಿನ ಹಾದಿಯಿಂದ ಇಳಿಕೆಗೊಂಡಿವೆ.
ಏರಿಕೆಗೊಂಡ ಷೇರುಗಳು:
ಕೋಲ್ ಇಂಡಿಯಾ ಷೇರುಗಳು ಸುಮಾರು 9 ರೂ.ಗಳ ಏರಿಕೆ ಕಂಡು 155.70 ರೂ., ಎನ್‌ಟಿಪಿಸಿ ಷೇರುಗಳು ಸುಮಾರು 5 ರೂ.ಗಳ ಏರಿಕೆ ಕಂಡು 112.70 ರೂ., ಐಒಸಿ ಷೇರುಗಳು ಸುಮಾರು 5 ರೂ.ಗಳ ಏರಿಕೆ ಕಂಡು 103.70 ರೂ., ಒಎನ್‌ಜಿಸಿ ಷೇರುಗಳು ಸುಮಾರು 4 ರೂ.ಗಳ ಏರಿಕೆ ಕಂಡು 118.10 ರೂ., ಬಿಪಿಸಿಎಲ್ ಷೇರುಗಳು ಸುಮಾರು 9 ರೂ.ಗಳ ಏರಿಕೆ ಕಂಡು 462.25 ರೂ. ತಲುಪಿದೆ.
ಇಳಿಕೆಗೊಂಡ ಷೇರುಗಳು:
ಜೆಎಸ್‌ಡಬ್ಲ್ಯು ಸ್ಟೀಲ್‌ನ ಷೇರು 24 ರೂ.ಗೆ ಇಳಿದು 734.25 ರೂ., ಹಿಂಡಾಲ್ಕೊ ಷೇರುಗಳು ಸುಮಾರು 13 ರೂ.ಗಳ ಕುಸಿತದೊಂದಿಗೆ 412.80 ರೂ., ಕೊಟಕ್ ಮಹೀಂದ್ರಾ ಷೇರುಗಳು ಸುಮಾರು 54 ರೂ.ಗಳನ್ನು ಕಳೆದುಕೊಂಡು 1,755.45 ರೂ.ಗೆ ತಲುಪಿದೆ. ಎಚ್‌ಡಿಎಫ್‌ಸಿ ಷೇರುಗಳು ತಲಾ 67 ರೂ.ಗಳಷ್ಟು ಇಳಿಕೆಯಾಗಿ 2,464.20 ರೂ. ಹಾಗೂ ದೇವಿ ಲ್ಯಾಬ್ ಷೇರುಗಳು 66 ರೂ.ಗಳ ಇಳಿಕೆ ಕಂಡು 4,073.60 ರೂ. ಮುಟ್ಟಿದೆ.


Click it and Unblock the Notifications