For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್‌ 440 ಪಾಯಿಂಟ್ಸ್‌ ಕುಸಿತ: ನಿಫ್ಟಿ ಕೂಡ ಇಳಿಕೆ

|

ಸೋಮವಾರ ಏರಿಕೆಗೊಂಡಿದ್ದ ಭಾರತೀಯ ಷೇರುಪೇಟೆ ಮಂಗಳವಾರ ಇಳಿಕೆಯೊಂದಿಗೆ ದಿನದ ವಹಿವಾಟು ಆರಂಭಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 440 ಪಾಯಿಂಟ್ಸ್ ಕುಸಿದರೆ, ನಿಫ್ಟಿ 139 ಪಾಯಿಂಟ್ಸ್‌ ಇಳಿಕೆಗೊಂಡಿದೆ.

ಬಿಎಸ್ಇ ಸೆನ್ಸೆಕ್ಸ್ 440.41 ಪಾಯಿಂಟ್‌ಗಳಷ್ಟು ಕುಸಿದು 49062.00 ಮಟ್ಟದಲ್ಲಿ ತೆರೆಯಿತು. ಅದೇ ಸಮಯದಲ್ಲಿ, ಎನ್ಎಸ್ಇ ನಿಫ್ಟಿ 139.60 ಪಾಯಿಂಟ್‌ಗಳ ಕುಸಿತದಿಂದ 14802.80 ಮಟ್ಟದಲ್ಲಿ ತೆರೆಯಿತು.

ಸೆನ್ಸೆಕ್ಸ್‌ 440 ಪಾಯಿಂಟ್ಸ್‌ ಕುಸಿತ: ನಿಫ್ಟಿ ಕೂಡ ಇಳಿಕೆ

ಬಿಎಸ್‌ಇನಲ್ಲಿನ ವಹಿವಾಟು ಆರಂಭದಲ್ಲಿ 1,643 ಕಂಪನಿಗಳಲ್ಲಿ ವಹಿವಾಟು ಪ್ರಾರಂಭಿಸಿದ್ದು, ಈ ಪೈಕಿ ಸುಮಾರು 603 ಷೇರುಗಳು ಏರಿಕೆಗೊಂಡರೆ, 954 ಷೇರುಗಳು ಕುಸಿದವು ಮತ್ತು ಅದೇ ಸಮಯದಲ್ಲಿ 86 ಕಂಪನಿಗಳ ಷೇರು ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.

ದೇವಿ ಲ್ಯಾಬ್ ಷೇರುಗಳು ಸುಮಾರು 29 ರೂ.ಗಳ ಏರಿಕೆ ಕಂಡು 4,168.55 ರೂ., ಸನ್ ಫಾರ್ಮಾ ಷೇರುಗಳು 4 ರೂ.ನಿಂದ 702.35 ರೂ., ಹಿಂಡಾಲ್ಕೊ ಷೇರು ಸುಮಾರು 12 ರೂ.ನಿಂದ ಇಳಿದು 413.75 ರೂ.ಗೆ ತಲುಪಿದೆ.

ಜೆಎಸ್‌ಡಬ್ಲ್ಯೂ ಸ್ಟೀಲ್ ಷೇರುಗಳು ಸುಮಾರು 18 ರೂ.ಗಳ ಕುಸಿತ ಕಂಡು 740.45 ರೂ., ಟಾಟಾ ಸ್ಟೀಲ್ ಷೇರುಗಳು ಸುಮಾರು 29 ರೂ.ಗಳ ಕುಸಿತ ಕಂಡು 1,187.25 ರೂ., ಒಎನ್‌ಜಿಸಿ ಷೇರುಗಳು ಸುಮಾರು 2 ರೂ.ಗಳನ್ನು ಕಳೆದುಕೊಂಡು 111.70 ರೂ., ಎಚ್‌ಡಿಎಫ್‌ಸಿ ಷೇರುಗಳು ಸುಮಾರು 46 ರೂ.ಗಳ ಕುಸಿತ ಕಂಡು 2,485.05 ರೂ. ಮುಟ್ಟಿದೆ.

ಇನ್ನು ಈಕ್ವಿಟಿ ಮಾರುಕಟ್ಟೆಯಲ್ಲಿನ ದೌರ್ಬಲ್ಯದ ಮಧ್ಯೆ ಭಾರತೀಯ ರೂಪಾಯಿ 13 ಪೈಸೆ ಇಳಿದು ಪ್ರತಿ ಡಾಲರ್‌ಗೆ 73.48 ಕ್ಕೆ ತಲುಪಿದೆ.

English summary

Sensex Down 440 Points: Nifty 140 Points Low

Nifty50 down and the BSE Sensex low 440 points at 49062 Level
Story first published: Tuesday, May 11, 2021, 10:49 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X