ಭಾರತೀಯ ಷೇರುಪೇಟೆ ಮಂಗಳವಾರ ಮತ್ತೊಮ್ಮೆ ಕುಸಿತಕ್ಕೆ ಸಾಕ್ಷಿಯಾಗಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 465 ಪಾಯಿಂಟ್ಸ್ ಇಳಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 137 ಪಾಯಿಂಟ್ಸ್ ಕುಸಿದಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 465.01 ಪಾಯಿಂಟ್ಸ್ ಅಥವಾ ಶೇಕಡಾ 0.95ರಷ್ಟು ಇಳಿಕೆಗೊಂಡು 48,253.51 ಪಾಯಿಂಟ್ಸ್‌ಗೆ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 137.70 ಪಾಯಿಂಟ್ಸ್ ಅಥವಾ ಶೇಕಡಾ 0.94ರಷ್ಟು ಕುಸಿದು 14,496.50 ಪಾಯಿಂಟ್ಸ್ ತಲುಪಿದೆ.

ಇಂದು ಸುಮಾರು 1,374 ಷೇರುಗಳು ಏರಿಕೆಗೊಂಡರೆ, 1,534 ಷೇರುಗಳು ಕುಸಿತಗೊಂಡಿವೆ ಮತ್ತು 169 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್, ಸಿಪ್ಲಾ, ಡಾ.ರೆಡ್ಡಿ ಲ್ಯಾಬ್ಸ್, ಡಿವಿಸ್ ಲ್ಯಾಬ್ಸ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ನಿಫ್ಟಿಯಲ್ಲಿ ನಷ್ಟಗೊಂಡ ಪ್ರಮುಖ ಷೇರುಗಳಾಗಿವೆ. ಎಸ್‌ಬಿಐ ಲೈಫ್ ಇನ್ಸುರೆನ್ಸ್, ಒಎನ್‌ಜಿಸಿ, ಬಿಪಿಸಿಎಲ್, ಬಜಾಜ್ ಫೈನಾನ್ಸ್ ಮತ್ತು ಅದಾನಿ ಪೋರ್ಟ್ಸ್ ನಷ್ಟ ಅನುಭವಿಸಿವೆ.
ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಮಾರಾಟದ ಮಧ್ಯೆ ಭಾರತೀಯ ರೂಪಾಯಿ ಮೌಲ್ಯ 7 ಡಾಲರ್ ಏರಿಕೆಯಾಗಿ ಪ್ರತಿ ಡಾಲರ್‌ಗೆ 73.86 ಕ್ಕೆ ತಲುಪಿದೆ.


Click it and Unblock the Notifications