ಭಾರತೀಯ ಷೇರುಪೇಟೆ ತನ್ನ ಕುಸಿತವನ್ನು ಮುಂದುವರಿಸಿದ್ದು, ಬುಧವಾರ (ಮೇ 12) ದಿನದ ವಹಿವಾಟು ಅಂತ್ಯಕ್ಕೆ ಮುಂಬೈ ಷೇರುಪೇಟೆ ಸೆನ್ಸೆಕ್ಸ್ 471 ಪಾಯಿಂಟ್ಸ್ ಕುಸಿತಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 14700 ಮಟ್ಟಕ್ಕಿಂತ ಕೆಳಗೆ ಇಳಿದಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 471.01 ಪಾಯಿಂಟ್ ಅಥವಾ ಶೇಕಡಾ 0.96ರಷ್ಟು ಇಳಿಕೆಗೊಂಡು 48690.80 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 154.30 ಪಾಯಿಂಟ್ ಅಥವಾ ಶೇಕಡಾ 1.04ರಷ್ಟು ಇಳಿಕೆಗೊಂಡು 14696.50 ಪಾಯಿಂಟ್ಸ್ ಮುಟ್ಟಿದೆ.

ದಿನದ ವಹಿವಾಟು ಅಂತ್ಯಕ್ಕೆ ಸುಮಾರು 1571 ಷೇರುಗಳು ಏರಿಕೆಗೊಂಡರೆ, 1443 ಷೇರುಗಳು ಕುಸಿದವು, ಮತ್ತು 151 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಟಾಟಾ ಸ್ಟೀಲ್, ಹಿಂಡಾಲ್ಕೊ ಇಂಡಸ್ಟ್ರೀಸ್, ಜೆಎಸ್‌ಡಬ್ಲ್ಯೂ ಸ್ಟೀಲ್, ಇಂಡಸ್ಇಂಡ್ ಬ್ಯಾಂಕ್ ಮತ್ತು ಎಚ್‌ಯುಎಲ್ ನಿಫ್ಟಿಯಲ್ಲಿ ಹೆಚ್ಚು ನಷ್ಟ ಅನುಭವಿಸಿವೆ. ಟಾಟಾ ಮೋಟಾರ್ಸ್, ಟೈಟಾನ್ ಕಂಪನಿ, ಮಾರುತಿ ಸುಜುಕಿ, ಪವರ್ ಗ್ರಿಡ್ ಕಾರ್ಪ್ ಮತ್ತು ಯುಪಿಎಲ್ ಹೆಚ್ಚು ಲಾಭಗಳಿಸಿವೆ.
ಇನ್ನು ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಮಾರಾಟದ ಮಧ್ಯೆ ಭಾರತೀಯ ರೂಪಾಯಿ 8 ಪೈಸೆ ಇಳಿಕೆ ಕಂಡು 73.42 ರೂಪಾಯಿಗೆ ತಲುಪಿದೆ.


Click it and Unblock the Notifications