ಭಾರತೀಯ ಷೇರು ಮಾರುಕಟ್ಟೆ ಇಂದು ಮತ್ತೆ ಇಳಿಮುಖದೊಂದಿಗೆ ವಹಿವಾಟು ಪ್ರಾರಂಭವಾಯಿತು. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 536 ಪಾಯಿಂಟ್ಸ್ ಕುಸಿದರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 181 ಪಾಯಿಂಟ್ಸ್ ಇಳಿಕೆಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 1.09ರಷ್ಟು ಅಥವಾ 536 ಪಾಯಿಂಟ್ಸ್ ಕುಸಿದು 48,681 ಪಾಯಿಂಟ್ಸ್‌ಗೆ ತಲುಪಿದರೆ, ಎನ್‌ಎಸ್ಇ ಸೂಚ್ಯಂಕ ನಿಫ್ಟಿ ಶೇಕಡಾ 1.24ರಷ್ಟು ಅಥವಾ 181 ಪಾಯಿಂಟ್ಸ್ ಕುಸಿದು 14,377 ಪಾಯಿಂಟ್ಸ್‌ಗೆ ತಲುಪಿದೆ.

ಇಂದು ಬಿಎಸ್‌ಇಯಲ್ಲಿ ಒಟ್ಟು 1383 ಕಂಪನಿಗಳಲ್ಲಿ ವಹಿವಾಟು ಆರಂಭವಾಗಿದ್ದು, ಈ ಪೈಕಿ ಸುಮಾರು 340 ಷೇರುಗಳು ಏರಿಕೆಗೊಂಡರೆ 993 ಷೇರುಗಳು ಕುಸಿದವು ಮತ್ತು ಅದೇ ಸಮಯದಲ್ಲಿ, 50 ಕಂಪನಿಗಳ ಷೇರು ಬೆಲೆಗಳು ಕಡಿಮೆಯಾಗದೆ ಅಥವಾ ಹೆಚ್ಚಾಗದೆ ತೆರೆಯಲ್ಪಟ್ಟವು.
ಬಿಎಸ್‌ಇನಲ್ಲಿ ಒಎನ್‌ಜಿಸಿ, ಎಲ್&ಟಿ, ಬಜಾಜ್ ಫೈನಾನ್ಸ್, ಮಾರುತಿ, ಎಂ&ಎಂ, ಟೈಟಾನ್ ಮತ್ತು ಎಸ್‌ಬಿಐ ಪ್ರಮುಖವಾಗಿ ನಷ್ಟ ಅನುಭವಿಸಿದ ಷೇರುಗಳಾಗಿವೆ. ಇದೇ ವೇಳೆ ಕೋಟಕ್ ಬ್ಯಾಂಕ್, ಭಾರ್ತಿ ಏರ್‌ಟೆಲ್ ಮತ್ತು ಪವರ್‌ಗ್ರಿಡ್ ಷೇರುಗಳು ಏರಿಕೆ ಸಾಧಿಸಿವೆ.


Click it and Unblock the Notifications