ಭಾರತದ ಷೇರುಪೇಟೆಯು ಬುಧವಾರ ಕುಸಿತದ ಆರಂಭ ದಾಖಲಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 57 ಪಾಯಿಂಟ್ಸ್ ಕುಸಿತಗೊಂಡಿದ್ದು, ನಿಫ್ಟಿ 18 ಪಾಯಿಂಟ್ಸ್ ಇಳಿಕೆಗೊಂಡಿದೆ.
9.16ರ ಸುಮಾರಿಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 52.75 ಪಾಯಿಂಟ್ಸ್ ಅಥವಾ ಶೇಕಡಾ 0.11ರಷ್ಟು ಏರಿಕೆಗೊಂಡು 52803.93 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 18.30 ಪಾಯಿಂಟ್ಸ್ ಅಥವಾ ಶೇಕಡಾ 0.12ರಷ್ಟು ಹೆಚ್ಚಾಗಿ 15800 ಪಾಯಿಂಟ್ಟ್ ಮುಟ್ಟಿದೆ.
ಆರಂಭಿಕ ವಹಿವಾಟಿನಲ್ಲಿ 1095 ಷೇರುಗಳು ಏರಿಕೆಗೊಂಡರೆ, 748 ಷೇರುಗಳು ಕುಸಿದವು ಮತ್ತು 79 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹಾಗಿದ್ದಾರೆ ದಿನದ ಆರಂಭದಲ್ಲಿ ಯಾವೆಲ್ಲಾ ಷೇರುಗಳು ಏರಿಕೆಗೊಂಡಿವೆ ಮತ್ತು ಕುಸಿದಿವೆ ಎಂಬುದನ್ನು ಈ ಕೆಳಗೆ ತಿಳಿಯಿರಿ.

ಏರಿಕೆಗೊಂಡ ಷೇರುಗಳು:
ಏಷ್ಯನ್ ಪೇಂಟ್ಸ್‌ನ ಷೇರುಗಳು 31 ರೂ.ಗಳ ಏರಿಕೆ ಕಂಡು 3,033.00 ರೂ., ಗ್ಲ್ಯಾಂಡ್‌ನ ಷೇರು 29 ರೂ.ಗಳ ಏರಿಕೆ ಕಂಡು 3,431.30 ರೂ., ಟೈಟಾನ್ ಕಂಪನಿಯ ಷೇರು 17 ರೂ.ಗಳ ಏರಿಕೆ ಕಂಡು 1,779.70 ರೂ., ಅದಾನಿ ಪೋರ್ಟ್ಸ್ ಷೇರು ಸುಮಾರು 5 ರೂ.ಗಳ ಲಾಭದೊಂದಿಗೆ 717.90 ರೂಗಳಲ್ಲಿ ಪ್ರಾರಂಭವಾಯಿತು. ಪವರ್ ಗ್ರಿಡ್ ಕಾರ್ಪೊರೇಶನ್‌ನ ಷೇರುಗಳು ಸುಮಾರು 1 ರೂ.ಗಳಷ್ಟು ಏರಿಕೆಯಾಗಿ 229.90 ರೂ. ತಲುಪಿದೆ.
ಇಳಿಕೆಗೊಂಡ ಷೇರುಗಳು:
ಶ್ರೀ ಸಿಮೆಂಟ್ ಷೇರುಗಳು 406 ರೂ.ಗಳ ಇಳಿಕೆ ಕಂಡು 27,362.70 ರೂ, ಟಾಟಾ ಮೋಟಾರ್ಸ್‌ನ ಷೇರುಗಳು ಸುಮಾರು 6 ರೂ.ಗಳಷ್ಟು ಇಳಿಕೆಯಾಗಿ 311.25 ರೂ., ಒಎನ್‌ಜಿಸಿಯ ಷೇರು ಸುಮಾರು 2 ರೂ.ಗಳ ಕುಸಿತದೊಂದಿಗೆ 120.00 ರೂ., ಇಂಡಸ್ಇಂಡ್ ಬ್ಯಾಂಕ್ ಷೇರುಗಳು 13 ರೂ.ಗಳ ಇಳಿಕೆ 1,018.55 ರೂ.ಗೆ ಪ್ರಾರಂಭವಾಯಿತು. ಮಹೀಂದ್ರಾ ಮತ್ತು ಮಹೀಂದ್ರಾ ಷೇರುಗಳು 8 ರೂ.ಗಳ ಕುಸಿತದೊಂದಿಗೆ 773.60 ರೂ. ಮುಟ್ಟಿದೆ.


Click it and Unblock the Notifications