For Quick Alerts
ALLOW NOTIFICATIONS  
For Daily Alerts

Closing Bell: ಸೆನ್ಸೆಕ್ಸ್ 870 ಪಾಯಿಂಟ್ಸ್ ಕುಸಿತ, ನಿಫ್ಟಿ ಕೂಡ ಇಳಿಕೆ

|

ಭಾರತೀಯ ಷೇರುಪೇಟೆ ಸೋಮವಾರ ಲಾಭದ ಬುಕ್ಕಿಂಗ್ ಜೊತೆಗೆ ಭಾರೀ ಕುಸಿತಕ್ಕೆ ಸಾಕ್ಷಿಯಾಗಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 870 ಪಾಯಿಂಟ್ಸ್ ಇಳಿಕೆಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 229 ಪಾಯಿಂಟ್ಸ್‌ ಕುಸಿದಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ ಶೇಕಡಾ 1.74ರಷ್ಟು ಅಥವಾ 870.51 ಪಾಯಿಂಟ್ ಕುಸಿದು 49,159.32 ಕ್ಕೆ ಇಳಿದಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 1.54ರಷ್ಟು ಅಥವಾ 229.60 ಪಾಯಿಂಟ್ಸ್ ಇಳಿಕೆಗೊಂಡು 14,637.80 ಪಾಯಿಂಟ್ಸ್‌ಗೆ ಇಳಿದಿದೆ. ಇಂದು ಸುಮಾರು 1,063 ಷೇರುಗಳು ಏರಿಕೆಯಾಗಿದ್ದು, 1,848 ಷೇರುಗಳು ಕುಸಿದವು, ಮತ್ತು 180 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಸೆನ್ಸೆಕ್ಸ್ 870 ಪಾಯಿಂಟ್ಸ್ ಕುಸಿತ, ನಿಫ್ಟಿ ಕೂಡ ಇಳಿಕೆ

ಬಜಾಜ್ ಫೈನಾನ್ಸ್, ಇಂಡಸ್ಇಂಡ್ ಬ್ಯಾಂಕ್, ಎಸ್‌ಬಿಐ, ಈಚರ್ ಮೋಟಾರ್ಸ್ ಮತ್ತು ಎಂ&ಎಂ ನಿಫ್ಟಿಯಲ್ಲಿ ಪ್ರಮುಖವಾಗಿ ನಷ್ಟ ಅನುಭವಿಸಿದ್ದ ಷೇರುಗಳಾಗಿದ್ದು, ಎಚ್‌ಸಿಎಲ್ ಟೆಕ್ನಾಲಜೀಸ್, ಟಿಸಿಎಸ್, ಬ್ರಿಟಾನಿಯಾ ಇಂಡಸ್ಟ್ರೀಸ್, ವಿಪ್ರೊ ಮತ್ತು ಇನ್ಫೋಸಿಸ್ ಲಾಭಗಳಿಸಿದ ಷೇರುಗಳಾಗಿವೆ.

ನಿಫ್ಟಿ ಪಿಎಸ್‌ಯು ಬ್ಯಾಂಕ್ ಸೂಚ್ಯಂಕ ಶೇಕಡಾ 4 ರಷ್ಟು, ನಿಫ್ಟಿ ಬ್ಯಾಂಕ್ ಸೂಚ್ಯಂಕ ಶೇಕಡಾ 3ರಷ್ಟು ಮತ್ತು ಆಟೊಮೊಬೈಲ್ ಶೇಕಡಾ 2ಕ್ಕಿಂತಲೂ ಹೆಚ್ಚು ಕುಸಿದಿದೆ. ಆದರೆ, ಐಟಿ ಸೂಚ್ಯಂಕ ಶೇ. 2ರಷ್ಟು ಲಾಭ ಗಳಿಸಿದೆ.

ಭಾರತದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಆತಂಕದ ಹಿನ್ನೆಲೆಯಲ್ಲಿ, ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಮಾರಾಟದ ಮಧ್ಯೆ ಭಾರತೀಯ ರೂಪಾಯಿ ಮೌಲ್ಯ 19 ಡಾಲರ್ ಇಳಿಕೆಗೆ 73.30 ಕ್ಕೆ ತಲುಪಿದೆ.

English summary

Sensex Down 870 Points: Nifty Ends Below 14,650

Sensex was down 870.51 points or 1.74% at 49,159.32, and the Nifty was down 229.60 points or 1.54% at 14,637.80.
Story first published: Monday, April 5, 2021, 16:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X