ಭಾರತೀಯ ಷೇರುಪೇಟೆ ಬುಧವಾರ ಭಾರೀ ಕುಸಿತಕ್ಕೆ ಸಾಕ್ಷಿಯಾಗಿದೆ. ಮಂಗಳವಾರ ಕೆಂಪು ಬಣ್ಣಕ್ಕೆ ತಿರುಗಿದ್ದ ಮುಂಬೈ ಷೇರುಪೇಟೆ ಸೆನ್ಸೆಕ್ಸ್ 871 ಪಾಯಿಂಟ್ಸ್ ಇಳಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 265 ಪಾಯಿಂಟ್ಸ್ ಇಳಿಮುಖಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 1.74ರಷ್ಟು ಅಥವಾ 871.13 ಪಾಯಿಂಟ್ಸ್ ಇಳಿಕೆಗೊಂಡು 49,180.31 ಪಾಯಿಂಟ್ಸ್‌ಗೆ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 1.79ರಷ್ಟು ಅಥವಾ 265.35 ಪಾಯಿಂಟ್ಸ್ ಕುಸಿದು 14,549.40 ಪಾಯಿಂಟ್ಸ್‌ಗೆ ತಲುಪಿದೆ.

ಎನ್‌ಎಸ್‌ಇನಲ್ಲಿ ಎಂ&ಎಂ, ಎಸ್‌ಬಿಐ, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಐಟಿಸಿ, ಲಾರ್ಸೆನ್, ಎನ್‌ಟಿಪಿಸಿ, ಒಎನ್‌ಜಿಸಿ ಪ್ರಮುಖವಾಗಿ ನಷ್ಟ ಅನುಭವಿಸಿದ ಷೇರುಗಳಾಗಿವೆ, ಇದರ ನಡುವೆ ಸಿಪ್ಲಾ, ಪವರ್‌ಗ್ರಿಡ್‌ಕಾರ್ಪ್ ಲಾಭಗಳಸಿವೆ.
ಇನ್ನು ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಮಾರಾಟದ ಮಧ್ಯೆ ಭಾರತೀಯ ರೂಪಾಯಿ 13 ಪೈಸೆ ಇಳಿಕೆಯಾಗಿ, ಪ್ರತಿ ಡಾಲರ್‌ಗೆ 72.56 ಕ್ಕೆ ತಲುಪಿದೆ. ಇದು ಹಿಂದಿನ 72.43 ರೂಪಾಯಿಗೆ ಹೋಲಿಸಿದರೆ ಪ್ರತಿ ಡಾಲರ್‌ಗೆ 72.53 ಕ್ಕೆ ಇಳಿಯಿತು ಮತ್ತು 72.50-72.69 ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು.


Click it and Unblock the Notifications