For Quick Alerts
ALLOW NOTIFICATIONS  
For Daily Alerts

ಷೇರುಪೇಟೆ: ಸೆನ್ಸೆಕ್ಸ್ 400 ಪಾಯಿಂಟ್ಸ್ ಕುಸಿತ, ನಿಫ್ಟಿ 106 ಪಾಯಿಂಟ್ಸ್ ಇಳಿಕೆ

|

ಜಾಗತಿಕ ಸಕಾರಾತ್ಮಕ ಸೂಚನೆಗಳ ನಡುವೆ ಮುನ್ನುಗ್ಗುತ್ತಿದ್ದ ಭಾರತೀಯ ಷೇರುಪೇಟೆ ಶುಕ್ರವಾರ ಕುಸಿತಗೊಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 400ಕ್ಕೂ ಅಧಿಕ ಪಾಯಿಂಟ್ಸ್‌ ಕುಸಿದರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 106 ಪಾಯಿಂಟ್ಸ್ ಇಳಿಕೆಗೊಂಡಿದೆ.

ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ ಸುಮಾರು 405.05 ಪಾಯಿಂಟ್‌ಗಳ ಕುಸಿತ ಕಂಡು 49360.89 ಪಾಯಿಂಟ್‌ ಮಟ್ಟದಲ್ಲಿ ತೆರೆಯಿತು. ಅದೇ ಸಮಯದಲ್ಲಿ, ಎನ್ಎಸ್ಇ ನಿಫ್ಟಿ 147.50 ಪಾಯಿಂಟ್‌ಗಳ ಕುಸಿತದೊಂದಿಗೆ 14747.40 ಪಾಯಿಂಟ್ಸ್‌ ತಲುಪಿದೆ.

ಸೆನ್ಸೆಕ್ಸ್ 400 ಪಾಯಿಂಟ್ಸ್ ಕುಸಿತ, ನಿಫ್ಟಿ 106 ಪಾಯಿಂಟ್ಸ್ ಇಳಿಕೆ

ಇಂದು, ಬಿಎಸ್‌ಇಯಲ್ಲಿ ಒಟ್ಟು 1,016 ಕಂಪನಿಗಳು ವಹಿವಾಟು ಪ್ರಾರಂಭವಾಗಿದ್ದು, ಅದರಲ್ಲಿ ಸುಮಾರು 423 ಷೇರುಗಳು ಏರಿಕೆಗೊಂಡರೆ 519 ಷೇರುಗಳು ಕುಸಿದವು ಮತ್ತು ಅದೇ ಸಮಯದಲ್ಲಿ 74 ಕಂಪನಿಗಳ ಷೇರು ಬೆಲೆಗಳು ಕಡಿಮೆಯಾಗದೆ ಅಥವಾ ಹೆಚ್ಚಾಗದೆ ಉಳಿದಿವೆ.

ಏರಿಕೆಗೊಂಡ ಪ್ರಮುಖ ಷೇರುಗಳು
ವಿಪ್ರೋ ಷೇರುಗಳು ಸುಮಾರು 13 ರೂ.ಗಳ ಏರಿಕೆ ಕಂಡು 502.95 ರೂ. ತಲುಪಿದರೆ, ಡಾ. ರೆಡ್ಡಿ ಲ್ಯಾಬ್‌ನ ಷೇರು ಸುಮಾರು 49 ರೂ. ಏರಿಕೆಗೊಂಡು 5,150.95 ರೂ.ಗಳಲ್ಲಿ ಪ್ರಾರಂಭವಾಯಿತು. ಬಜಾಜ್ ಆಟೋ ಷೇರುಗಳು 37 ರೂ.ಗಳ ಏರಿಕೆ ಕಂಡು 3,873.85 ರೂ., ಎಚ್‌ಯುಎಲ್ ಷೇರುಗಳು ಸುಮಾರು 20 ರೂ.ನಿಂದ 2,427.70 ರೂ.ಗೆ ತಲುಪಿದೆ. ದೇವಿ ಲ್ಯಾಬ್ ಷೇರುಗಳು ಸುಮಾರು 31 ರೂ.ಗಳ ಏರಿಕೆ ಕಂಡು 3,941.70 ರೂ. ತಲುಪಿದೆ.

ಇಳಿಕೆಗೊಂಡ ಪ್ರಮುಖ ಷೇರುಗಳು
ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಸುಮಾರು 39 ರೂ.ಗಳ ಕುಸಿತ ಕಂಡು 1,433.10 ರೂ., ಎಚ್‌ಡಿಎಫ್‌ಸಿ ಷೇರುಗಳು ಸುಮಾರು 45 ರೂ.ಗಳ ಕುಸಿತ ಕಂಡು 2,493.75 ರೂ., ಐಸಿಐಸಿಐ ಬ್ಯಾಂಕ್ ಷೇರುಗಳು ಸುಮಾರು 12 ರೂ.ಗಳ ಕುಸಿತ ಕಂಡು 609.90 ರೂ., ಎಸ್‌ಬಿಐ ಷೇರುಗಳು ಸುಮಾರು 7 ರೂ.ಗಳ ಕುಸಿತ ಕಂಡು 352.80 ರೂ., ಟಾಟಾ ಮೋಟಾರ್ಸ್ ಷೇರುಗಳು ತಲಾ 5 ರೂ.ಗಳಷ್ಟು ಇಳಿಕೆಯಾಗಿ 297.00 ರೂ. ತಲುಪಿದೆ.

English summary

Sensex Down Over 400 Points: Nifty Below 14,850

BSE Sensex Down Over 400 Points 49,450, while the broader Nifty 50 index was ruling below 14,850.
Story first published: Friday, April 30, 2021, 11:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X