ಷೇರುಪೇಟೆ: 400 ಪಾಯಿಂಟ್ಸ್‌ ಕುಸಿದ ಸೆನ್ಸೆಕ್ಸ್, 15,000 ಗಡಿಯಿಂದ ಕೆಳಗಿಳಿದ ನಿಫ್ಟಿ

ಭಾರತೀಯ ಷೇರುಪೇಟೆ ಮತ್ತೊಮ್ಮೆ ತನ್ನ ಕುಸಿತವನ್ನು ಮುಂದುವರಿಸಿದ್ದು, ಶುಕ್ರವಾರ ಮುಂಬೈ ಷೇರುಪೇಟೆ ಸೆನ್ಸೆಕ್ಸ್ 400 ಪಾಯಿಂಟ್ಸ್‌ ಕುಸಿದರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 15 ಸಾವಿರ ಗಡಿಯಿಂದ ಕೆಳಗಿಳಿದಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ ಶೇಕಡಾ 0.87ರಷ್ಟು ಅಥವಾ 440.76 ಪಾಯಿಂಟ್ಸ್‌ ಇಳಿಕೆಗೊಂಡು 50,405.32 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.95ರಷ್ಟು ಅಥವಾ 142.65 ಪಾಯಿಂಟ್ಸ್‌ ಕುಸಿದು 14,938.10 ಪಾಯಿಂಟ್ಸ್‌ಗೆ ಕುಸಿದಿದೆ.

400 ಪಾಯಿಂಟ್ಸ್‌ ಕುಸಿದ ಸೆನ್ಸೆಕ್ಸ್, 15,000 ಗಡಿಯಿಂದ ಕುಸಿದ ನಿಫ್ಟಿ

ದುರ್ಬಲ ಜಾಗತಿಕ ಸೂಚನೆಗಳ ಕಾರಣದಿಂದಾಗಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕವು ಇಂದು ಆರಂಭದಲ್ಲೇ ಇಳಿಕೆಯೊಂದಿಗೆ ವಹಿವಾಟು ಆರಂಭಿಸಿತ್ತು. ನಿಫ್ಟಿ ಮಿಡ್‌ಕ್ಯಾಪ್ 100 ಸೂಚ್ಯಂಕವು ಶೇಕಡಾ 2.15ರಷ್ಟು ಮತ್ತು ನಿಫ್ಟಿ ಸ್ಮಾಲ್‌ಕ್ಯಾಪ್ 100 ಸೂಚ್ಯಂಕವು ಶೇಕಡಾ 1.55 ಪ್ರತಿಶತದಷ್ಟು ಕುಸಿದಿದ್ದರೆ, ನಿಫ್ಟಿ ಮಿಡ್‌ಕ್ಯಾಪ್ 50 ಶೇಕಡಾ 2.79 ರಷ್ಟು ಕುಸಿದಿದೆ.

ಗೇಲ್‌ ಷೇರುಗಳು , ಮಾರುತಿ ಸುಜುಕಿ ಷೇರುಗಳು, ಕೊಟಕ್ ಮಹೀಂದ್ರಾ ಷೇರುಗಳು , ಹೀರೋ ಮೊಟೊಕಾರ್ಪ್ ಷೇರುಗಳು ಇಂದು ಏರಿಕೆಗೊಂಡ ಪ್ರಮುಖ ಷೇರುಗಳಾಗಿದ್ದು, ಇಂಡಸ್‌ಇಂಡ್ ಬ್ಯಾಂಕಿನ ಷೇರುಗಳು , ಟಾಟಾ ಮೋಟಾರ್ಸ್, ವಿಪ್ರೊ , ಯುಪಿಎಲ್ , ಹಿಂಡಾಲ್ಕೊ ಷೇರುಗಳು ಕುಸಿತಗೊಂಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+