For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ 1000 ಪಾಯಿಂಟ್ಸ್ ಕುಸಿತ: 15 ಸಾವಿರ ಗಡಿಯಿಂದ ಕೆಳಗಿಳಿದ ನಿಫ್ಟಿ

|

ಭಾರತೀಯ ಷೇರುಪೇಟೆ ಶುಕ್ರವಾರ (ಫೆ. 26) ಭಾರೀ ಕುಸಿತದೊಂದಿಗೆ ವಹಿವಾಟು ಆರಂಭಿಸಿದೆ. ಬಿಎಸ್‌ಇ ಸೆನ್ಸೆಕ್ಸ್ 1057.48 ಪಾಯಿಂಟ್‌ಗಳ ಕುಸಿತ ಕಂಡಿದ್ದು, 49981.83 ರ ಮಟ್ಟದಲ್ಲಿ ತೆರೆಯಿತು. ಅದೇ ಸಮಯದಲ್ಲಿ, ಎನ್ಎಸ್ಇ ನಿಫ್ಟಿ 305.90 ಪಾಯಿಂಟ್‌ಗಳ ಕುಸಿತದೊಂದಿಗೆ 14791.50 ಪಾಯಿಂಟ್‌ಗಳಲ್ಲಿ ವಹಿವಾಟು ಆರಂಭಿಸಿತು.

 

ಇಂದು, ಬಿಎಸ್‌ಇಯಲ್ಲಿ ಒಟ್ಟು 1,091 ಕಂಪನಿಗಳಲ್ಲಿ ವಹಿವಾಟು ಪ್ರಾರಂಭವಾಗಿದ್ದು, ಅದರಲ್ಲಿ ಸುಮಾರು 338 ಷೇರುಗಳು ಲಾಭಗಳಿಸಿದರೆ 704 ಷೇರುಗಳು ನಷ್ಟಗೊಂಡವು. ಅದೇ ಸಮಯದಲ್ಲಿ, 49 ಕಂಪನಿಗಳ ಷೇರು ಬೆಲೆಗಳು ಹೆಚ್ಚಾಗದೆ ತೆರೆಯಲ್ಪಟ್ಟವು.

 
ಸೆನ್ಸೆಕ್ಸ್ 1000 ಪಾಯಿಂಟ್ಸ್ ಕುಸಿತ: ನಿಫ್ಟಿ ಕೂಡ ಇಳಿಕೆ

ಭಾರ್ತಿ ಏರ್‌ಟೆಲ್‌ನ ಷೇರು ಸುಮಾರು 3 ರೂ ಗಳಿಸಿ 581.65 ರೂ. ತಲುಪಿದರೆ, ಅಲ್ಟ್ರಾ ಟೆಕ್ ಸಿಮೆಂಟ್‌ನ ಷೇರುಗಳು ತಲಾ 25 ರೂ.ಗಳಷ್ಟು ಏರಿಕೆ ಕಂಡು 6,408.00 ರೂ. ಮುಟ್ಟಿದೆ.
ನೆಸ್ಲೆ ಷೇರು 20 ರೂ.ಗಳ ಏರಿಕೆ ಕಂಡು 16,134.00 ರೂ. ತಲುಪಿದೆ.

ನಿಫ್ಟಿಯಲ್ಲಿ ನಷ್ಟ ಅನುಭವಿಸಿದ ಅಗ್ರ ಷೇರುಗಳಲ್ಲಿ ಗೇಲ್ ಷೇರುಗಳು ಸುಮಾರು 6 ರೂ.ಗಳ ಕುಸಿತ ಕಂಡು 144.60 ರೂ., ಐಸಿಐಸಿಐ ಬ್ಯಾಂಕ್ ಷೇರುಗಳು ಸುಮಾರು 23 ರೂ.ಗಳ ಕುಸಿತ ಕಂಡು 604.90 ರೂ., ಒಎನ್‌ಜಿಸಿ ಷೇರುಗಳು ಸುಮಾರು 4 ರೂ.ಗಳನ್ನು ಕಳೆದುಕೊಂಡು 114.90 ರೂ., ಟಾಟಾ ಮೋಟಾರ್ಸ್ ಷೇರುಗಳು 10 ರೂ.ಗಳ ಕುಸಿತದೊಂದಿಗೆ 323.15 ರೂ. ಇಂಡಸ್‌ಇಂಡ್ ಬ್ಯಾಂಕಿನ ಷೇರುಗಳು ರೂ .1,076.20 ಕ್ಕೆ ಪ್ರಾರಂಭವಾಗಿದೆ.

English summary

Sensex Drop 1000 Points: Nifty Below 14,900

Domestic equity markets began trading on Friday morning down in red. Sensex Sheds Over 1000 Points and Nifty Below 14,900
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X