For Quick Alerts
ALLOW NOTIFICATIONS  
For Daily Alerts

Closing Bell: ಅದಾನಿ ಷೇರುಗಳ ಕುಸಿತದ ನಡುವೆ ಸೆನ್ಸೆಕ್ಸ್, ನಿಫ್ಟಿ ಏರಿಕೆ

|

ಅದಾನಿ ಗ್ರೂಪ್‌ನ ಷೇರುಗಳ ಕುಸಿತದ ನಡುವೆ ಭಾರತೀಯ ಮಾರುಕಟ್ಟೆಯು ಸಾಧಾರಣ ಚೇತರಿಕೆ ಕಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 76 ಪಾಯಿಂಟ್ಸ್‌ ಏರಿಕೆಗೊಂಡಿದ್ದು, ನಿಫ್ಟಿ 12 ಪಾಯಿಂಟ್ಸ್‌ ಹೆಚ್ಚಳಗೊಂಡಿದೆ.

 

ಒಂದೇ ಒಂದು ಟ್ವೀಟ್‌: ಅದಾನಿ ಗ್ರೂಪ್ ಷೇರುಗಳು ಶೇಕ್..! ಅಂತದ್ದೇನಾಯ್ತು?ಒಂದೇ ಒಂದು ಟ್ವೀಟ್‌: ಅದಾನಿ ಗ್ರೂಪ್ ಷೇರುಗಳು ಶೇಕ್..! ಅಂತದ್ದೇನಾಯ್ತು?

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 76.77 ಪಾಯಿಂಟ್ಸ್‌ ಅಥವಾ ಶೇಕಡಾ 0.15ರಷ್ಟು ಏರಿಕೆಗೊಂಡು 52551.53 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 12.50 ಪಾಯಿಂಟ್ಸ್‌ ಅಥವಾ ಶೇಕಡಾ 0.08ರಷ್ಟು ಏರಿಕೆಗೊಂಡು 15811.90 ಪಾಯಿಂಟ್ಸ್‌ ಮುಟ್ಟಿದೆ.

 
ಅದಾನಿ ಷೇರುಗಳ ಕುಸಿತದ ನಡುವೆ ಸೆನ್ಸೆಕ್ಸ್, ನಿಫ್ಟಿ ಏರಿಕೆ

ದಿನದ ವಹಿವಾಟು ಅಂತ್ಯಕ್ಕೆ 1624 ಷೇರುಗಳು ಏರಿಕೆಗೊಂಡರೆ, 1625 ಷೇರುಗಳು ಕುಸಿದವು ಮತ್ತು 150 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಟಾಟಾ ಮೋಟಾರ್ಸ್, ರಿಲಯನ್ಸ್ ಇಂಡಸ್ಟ್ರೀಸ್, ವಿಪ್ರೋ, ಡಿವಿಸ್ ಲ್ಯಾಬ್ಸ್ ಮತ್ತು ಬಜಾಜ್ ಫೈನಾನ್ಸ್ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಅದಾನಿ ಪೋರ್ಟ್ಸ್, ಕೋಲ್ ಇಂಡಿಯಾ, ಕೊಟಕ್ ಮಹೀಂದ್ರಾ ಬ್ಯಾಂಕ್, ಎಚ್‌ಡಿಎಫ್‌ಸಿ ಮತ್ತು ಮಾರುತಿ ಸುಜುಕಿ ನಷ್ಟ ಅನುಭವಿಸಿದ ಷೇರುಗಳಾಗಿವೆ.

ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಚಂಚಲ ವಹಿವಾಟಿನ ಮಧ್ಯೆ ಭಾರತೀಯ ರೂಪಾಯಿ 20 ಪೈಸೆ ಇಳಿಕೆಯಾಗಿ ಪ್ರತಿ ಡಾಲರ್‌ಗೆ 73.27 ಕ್ಕೆ ತಲುಪಿದೆ.

English summary

Sensex End Marginally Higher Amid Adani Group Stock Plunge

Sensex was up 76.77 points or 0.15% at 52551.53, and the Nifty was up 12.50 points or 0.08% at 15811.90.
Story first published: Monday, June 14, 2021, 16:57 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X