For Quick Alerts
ALLOW NOTIFICATIONS  
For Daily Alerts

31 ಸಾವಿರ ಗಡಿ ದಾಟಿದ್ದ ಸೆನ್ಸೆಕ್ಸ್ 130 ಪಾಯಿಂಟ್ಸ್ ಕುಸಿತ

|

ಶುಕ್ರವಾರ ಭಾರತದ ಷೇರುಪೇಟೆ ಸಕಾರಾತ್ಮಕವಾಗಿ ವಹಿವಾಟು ಕಾಣುವ ಲಕ್ಷಣ ತೋರಿದ್ರೂ ವಹಿವಾಟು ಕೊನೆಗೆ ಮತ್ತೆ ಕುಸಿತ ಕಂಡಿದೆ. ದಿನದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಗರಿಷ್ಟ 31 ಸಾವಿರದ ಗಡಿಯನ್ನೂ ದಾಟಿತ್ತು. ಆದರೆ ದಿನದ ವಹಿವಾಟಿನ ಕೊನೆಗೆ 130 ಪಾಯಿಂಟ್ಸ್‌ಗಳ ಇಳಿಕೆ ಕಂಡಿದೆ.

ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ದಿನದ ವಹಿವಾಟಿನಲ್ಲಿ ಗರಿಷ್ಠ 9,038 ಪಾಯಿಂಟ್ಸ್ ದಾಖಲಿಸಿತ್ತು. ಆದರೆ ಆರ್‌ಬಿಐ ರೆಪೋ ದರ ಕಡಿತದ ಬಳಿಕ ಇಳಿಕೆಯತ್ತ ಸಾಗಿದ ನಿಫ್ಟಿ, ಕೇವಲ 18 ಪಾಯಿಂಟ್ಸ್ ಏರಿಕೆಯೊಂದಿಗೆ 8,660 ಪಾಯಿಂಟ್ಸ್ ದಾಖಲಿಸಿದೆ. ಇನ್ನು ಮುಂಬೈ ಷೇರುಪೇಟೆ ಸೆನ್ಸೆಕ್ಸ್ 131.18 ಪಾಯಿಂಟ್ಸ್ ಇಳಿಕೆ ಕಂಡು 29,815 ಪಾಯಿಂಟ್ಸ್ ಮುಟ್ಟಿದೆ.

31 ಸಾವಿರ ಗಡಿ ದಾಟಿದ್ದ ಸೆನ್ಸೆಕ್ಸ್ 130 ಪಾಯಿಂಟ್ಸ್ ಕುಸಿತ

ನಷ್ಟ ಅನುಭವಿಸಿದ ಪ್ರಮುಖ ಷೇರುಗಳು:

ಬಜಾಜ್ ಫೈನಾನ್ಸ್, ಹೀರೋ ಮೋಟೊಕಾರ್ಪ್, ಇಂಡಸ್‌ಲ್ಯಾಂಡ್ ಬ್ಯಾಂಕ್, ಬಜಾಜ್ ಫಿನ್ಸರ್ವ್, ಗೇಲ್, ಮಾರುತಿ ಸುಜುಕಿ, ಭಾರ್ತಿ ಏರ್‌ಟೆಲ್

ಲಾಭ ಗಳಿಸಿದ ಪ್ರಮುಖ ಷೇರುಗಳು :

ಕೋಲ್ ಇಂಡಿಯಾ, ಸಿಪ್ಲಾ, ಆ್ಯಕ್ಸಿಸ್ ಬ್ಯಾಂಕ್, ಐಟಿಸಿ, ಎನ್‌ಟಿಪಿಸಿ, ಎಂ ಅಂಡ್ ಎಂ, ಯುಪಿಎಲ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ, ಟಿಸಿಎಸ್, ಎಸ್‌ಬಿಐ, ಇನ್ಫೋಸಿಸ್, ನೆಸ್ಲೆ, ಇನ್ಫೋಸಿಸ್, ಅದಾನಿ ಪೋರ್ಟ್ಸ್

English summary

Sensex Ends 130 Points Lower Nifty Hold 8600

Sensex ends 130 pts Lower despite rate cut, Nifty hold 8,600
Story first published: Friday, March 27, 2020, 16:27 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X