ಭಾರತೀಯ ಷೇರುಪೇಟೆ ಸತತ ಕುಸಿತಕ್ಕೆ ಸಾಕ್ಷಿಯಾಗಿದ್ದು, ಶುಕ್ರವಾರ ಮುಂಬೈ ಷೇರುಪೇಟೆ ಸೆನ್ಸೆಕ್ಸ್ 435 ಪಾಯಿಂಟ್ಸ್ ಕುಸಿದಿದ್ದು, ನಿಫ್ಟಿ 15 ಸಾವಿರ ಗಡಿಯಿಂದ ಕೆಳಗಿಳಿದಿದೆ. ಏಷ್ಯಾದ ದುರ್ಬಲ ಮಾರುಕಟ್ಟೆ ಮತ್ತು ಕೋವಿಡ್-19 ಎರಡನೇ ಸುತ್ತಿನ ಲಾಕ್‌ಡೌನ್ ಭೀತಿಯು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 434.93 ಪಾಯಿಂಟ್ಸ್ ಅಥವಾ ಶೇಕಡಾ 0.85ರಷ್ಟು ಕುಸಿತಗೊಂಡು 50,889.76 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 137.20 ಪಾಯಿಂಟ್ಸ್ ಅಥವಾ ಶೇಕಡಾ 0.97ರಷ್ಟು ಇಳಿಕೆಗೊಂಡು 14,981.80 ಪಾಯಿಂಟ್ಸ್ ಮುಟ್ಟಿದೆ. ಇಂದು 1,175 ಷೇರುಗಳು ಏರಿಕೆಗೊಂಡರೆ, 1,727 ಷೇರುಗಳು ಕುಸಿತ ಕಂಡಿದ್ದು, 170 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಒಎನ್‌ಜಿಸಿ, ಹೀರೋ ಮೊಟೊಕಾರ್ಪ್, ಟಾಟಾ ಸ್ಟೀಲ್, ಎಸ್‌ಬಿಐ ಮತ್ತು ಟಾಟಾ ಮೋಟಾರ್ಸ್ ನಿಫ್ಟಿಯಲ್ಲಿ ಪ್ರಮುಖವಾಗಿ ನಷ್ಟ ಅನುಭವಿಸಿದ ಷೇರುಗಳಾಗಿದ್ದು, ಯುಪಿಎಲ್, ಇಂಡಸ್‌ಇಂಡ್ ಬ್ಯಾಂಕ್, ಡಾ. ರೆಡ್ಡಿ ಲ್ಯಾಬ್ಸ್, ಗೇಲ್ ಮತ್ತು ಎಚ್‌ಯುಎಲ್ ಲಾಭ ಗಳಿಸಿವೆ.
ಬಹುತೇಕ ಎಲ್ಲಾ ವಲಯ ಸೂಚ್ಯಂಕಗಳು ಪಿಎಸ್‌ಯು ಬ್ಯಾಂಕ್ ಶೇ. 4.7 ರಷ್ಟು ಕುಸಿದಿದ್ದರೆ, ಆಟೋ, ಬ್ಯಾಂಕ್, ಇನ್ಫ್ರಾ, ಮೆಟಲ್ ಮತ್ತು ಫಾರ್ಮಾ ಸೂಚ್ಯಂಕಗಳು ಶೇಕಡಾ 1-2 ರಷ್ಟು ಕುಸಿದವು. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಕೆಂಪು ಬಣ್ಣದಲ್ಲಿ ಕೊನೆಗೊಂಡಿವೆ.


Click it and Unblock the Notifications