ಬುಧವಾರ ಷೇರುಪೇಟೆಯು ದಾಖಲೆಯ ಏರಿಕೆ ಕಂಡಿದೆ. ಮುಂಬೈ ಷೇರು ಮಾರುಕಟ್ಟೆ (ಬಿಎಸ್ಐ) ಸಾರ್ವಕಾಲಿಕ ಗರಿಷ್ಟ ಮಟ್ಟ ತಲುಪಿದ್ದು 181 ಅಂಶಗಳ ಏರಿಕೆಯೊಂದಿಗೆ ಈ ಹಿಂದಿನ ದಾಖಲೆಯನ್ನು ಸರಿಗಟ್ಟಿ ಹೊಸ ಎತ್ತರಕ್ಕೆ ಜಿಗಿದಿದೆ. ರಿಲಯನ್ಸ್ ಇಂಡಸ್ಟ್ರೀಸ್ ಷೇರು ಮತ್ತಷ್ಟು ಉತ್ತೇಜನಗೊಂಡು ಉತ್ತಮ ವಹಿವಾಟು ಕಂಡಿದೆ.
ಸೆನ್ಸೆಕ್ಸ್ 40,816.38 ಅಂಶಗಳನ್ನು ಮುಟ್ಟಿದರೆ, ರಾಷ್ಟ್ರೀಯ ಷೇರುಪೇಟೆ(ಎನ್‌ಎಸ್ಇ) ಸೂಚ್ಯಂಕ ನಿಫ್ಟಿ ಮತ್ತೆ 12 ಸಾವಿರ ಗಡಿ ಮುಟ್ಟಿದೆ. ಬುಧವಾರ ಶೇಕಡಾ 0.49ಅಂಶಗಳ ಏರಿಕೆಯೊಂದಿಗೆ 12 ಸಾವಿರ ಗಡಿ ತಲುಪಿತು.

ಮಂಗಳವಾರ ಷೇರುಪೇಟೆಯಲ್ಲಿ ಉತ್ತಮ ವಹಿವಾಟು ನಡೆಸಿದ್ದ ರಿಲಿಯನ್ಸ್ ಇಂಡಸ್ಟ್ರೀಸ್ ಷೇರುಗಳು ಬುಧವಾರವೂ ಜಿಗಿತ ಕಂಡಿತು. ಜಿಯೋ ಶುಲ್ಕ ದರ ಏರಿಕೆ ಪ್ರಸ್ತಾಪ ಮಾಡಿದ ಬಳಿಕ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಮತ್ತಷ್ಟು ಉತ್ತೇಜನಗೊಂಡು ದಾಖಲೆಯ ಗರಿಷ್ಟ 1,547.05 ಗೆ ವಹಿವಾಟು ಮುಗಿಸಿತು. ಅಲ್ಲದೆ ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಬಂಡವಾಳ 10 ಲಕ್ಷ ಕೋಟಿ ರುಪಾಯಿಗೆ ಸಮೀಪಿಸಿದೆ.
ಭಾರ್ತಿ ಏರ್‌ಟೆಲ್, ಸನ್‌ಫಾರ್ಮಾ, ಏಷಿಯನ್ ಪೇಂಟ್ಸ್, ಯೆಸ್ ಬ್ಯಾಂಕ್ ಹಾಗೂ ಮಾರುತಿ ಕಂಪನಿಯ ಷೇರುಗಳು ಸೇರಿದಂತೆ ಟೆಲಿಕಾಂ ವಲಯದ ಷೇರುಗಳು ಉತ್ತಮ ವಹಿವಾಟು ಕಂಡಿವೆ. ಆದರೆ ಕೊಟಕ್ ಬ್ಯಾಂಕ್, ಬಜಾಜ್ ಆಟೋ, ಎನ್‌ಟಿಪಿಸಿ, ಎಸ್‌ಬಿಐ ಮತ್ತು ಹೀರೋ ಮೊಟೊಕಾರ್ಪ್ ಷೇರುಗಳಲ್ಲಿ ಇಳಿಕೆ ಕಂಡುಬಂದಿದೆ.


Click it and Unblock the Notifications