For Quick Alerts
ALLOW NOTIFICATIONS  
For Daily Alerts

ಷೇರುಪೇಟೆಯಲ್ಲಿ ಸೆನ್ಸೆಕ್ಸ್ ದಾಖಲೆಯ ಓಟ, ನಿಫ್ಟಿಯ ಭರ್ಜರಿ ಜೊತೆಯಾಟ

|

ಸೋಮವಾರ ಷೇರುಪೇಟೆಯು ಐತಿಹಾಸಿಕ ದಾಖಲೆ ಏರಿಕೆ ಕಂಡಿದೆ. ಮುಂಬೈ ಷೇರು ಮಾರುಕಟ್ಟೆ (ಬಿಎಸ್ಐ) 530 ಅಂಶಗಳ ಏರಿಕೆಯೊಂದಿಗೆ ಈ ಹಿಂದಿನ ದಾಖಲೆ ಮುರಿದು ಮತ್ತಷ್ಟು ಎತ್ತರಕ್ಕೆ ಸಾಗಿದೆ. ರಿಲಯನ್ಸ್, ಏರ್‌ಟೆಲ್, ಆ್ಯಕ್ಸಿಸ್ ಬ್ಯಾಂಕ್, ಕೋಟಕ್ ಮಹಿಂದ್ರಾ ಬ್ಯಾಂಕ್‌ ಷೇರುಗಳು ಉತ್ತಮ ವಹಿವಾಟು ಕಂಡಿವೆ.

 

ಸೆನ್ಸೆಕ್ಸ್ 530 ಅಂಶಗಳು ಅಥವಾ ಶೇಕಡಾ 1.31ರಷ್ಟು ಏರಿಕೆ ಕಂಡು 40889.23 ಅಂಶಗಳನ್ನು ಮುಟ್ಟಿದರೆ, ರಾಷ್ಟ್ರೀಯ ಷೇರುಪೇಟೆ(ಎನ್‌ಎಸ್ಇ) ಸೂಚ್ಯಂಕ ನಿಫ್ಟಿ ಕೂಡ 159.40 ಅಂಶಗಳು ಏರಿಕೆಗೊಂಡು 12073.80ಗೆ ತಲುಪಿತು. ನಿಫ್ಟಿ ಶೇಕಡಾ 1.34ರಷ್ಟು ಜಿಗಿತ ಕಂಡಿದೆ.

 
ಷೇರುಪೇಟೆಯಲ್ಲಿ ಸೆನ್ಸೆಕ್ಸ್ ದಾಖಲೆಯ ಓಟ, ನಿಫ್ಟಿಯ ಭರ್ಜರಿ ಜೊತೆಯಾಟ

ಕಳೆದ ಕೆಲವು ವಾರಗಳಿಂದ ತನ್ನದೇ ದಾಖಲೆಯನ್ನು ಮುರಿದು ಉತ್ತಮ ವಹಿವಾಟು ನಡೆಸುತ್ತಿರುವ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಇಂಟ್ರಾಡೇ ವಹಿವಾಟಿನಲ್ಲಿ ಶೇಕಡಾ 1ರಷ್ಟು ಏರಿಕೆ ದಾಖಲಿಸಿವೆ. ಭಾರತಿ ಏರ್‌ಟೆಲ್ ಜೊತೆಗೆ ಬ್ಯಾಂಕಿಂಗ್ ಷೇರುಗಳಾದ ಆ್ಯಕ್ಸಿಸ್ ಬ್ಯಾಂಕ್, ಕೋಟಕ್ ಮಹಿಂದ್ರಾ , ಹೆಚ್‌ಡಿಎಫ್‌ಸಿ, ಟಾಟಾ ಸ್ಟೀಲ್ ಕಂಪನಿಯ ಷೇರುಗಳು ಉತ್ತಮ ಏರಿಕೆ ದಾಖಲಿಸಿವೆ.

ಹಲವು ದಿನಗಳ ಹಿಂದೆ ಉತ್ತಮ ವಹಿವಾಟು ನಡೆಸಿದ್ದ ಯೆಸ್ ಬ್ಯಾಂಕ್‌ ಶೇಕಡಾ 2 ರಷ್ಟು ಕುಸಿತ ಕಂಡಿದೆ. ಜೊತೆಗೆ , ಜೀ ಎಂಟರ್‌ಟೈನ್‌ಮೆಂಟ್, ಓಎನ್‌ಜಿಸಿ ಕಂಪನಿ ಷೇರುಗಳು ಸೋಮವಾರ ಹೆಚ್ಚು ಕುಸಿತಕ್ಕೊಳಗಾಗಿವೆ.

English summary

Sensex Ends Record High, Nifty Joins The Party

The sensex to its fresh all time record high on monday, while nifty ended 1.34 percent high.
Story first published: Monday, November 25, 2019, 16:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X