ಜಾಗತಿಕ ಮಟ್ಟದಲ್ಲಿ ಕೊರೊನಾವೈರಸ್ ಭೀತಿ ಬಳಿಕ ಭಾರತದಲ್ಲೂ ವೈರಾಣು ಭಾರೀ ಸಂಚಲನವನ್ನೇ ಸೃಷ್ಟಿಸಿತ್ತು. ಇದರ ಪರಿಣಾಮ ಸೋಮವಾರ(ಮಾರ್ಚ್ 02) ಷೇರುಪೇಟೆ ಮೇಲೂ ಪರಿಣಾಮ ಬೀರಿತ್ತು. ಆದರೆ ಕೊರೊನಾ ಭೀತಿಯ ನಡುವೆ ಮಂಗಳವಾರ ಸೆನ್ಸೆಕ್ಸ್ ಚೇತರಿಕೆ ಕಂಡಿದೆ.
ಸೆನ್ಸೆಕ್ಸ್ 479.69 ಪಾಯಿಂಟ್ಸ್ ಏರಿಕೆ ಕಂಡಿದ್ದು 1.26 ಪರ್ಸೆಂಟ್ ಏರಿಕೆ ದಾಖಲಿಸಿದೆ. ರಾಷ್ಟ್ರೀಯ ಷೇರುಪೇಟೆ(ಎನ್‌ಎಸ್ಇ) ಸೂಚ್ಯಂಕ ನಿಫ್ಟಿ 1.53 ಪರ್ಸೆಂಟ್ ಏರಿಕೆ ಕಂಡಿದ್ದು 170.55 ಪಾಯಿಂಟ್ಸ್ ಏರಿಕೆ ದಾಖಲಿಸಿದೆ.

ದಿನದಂತ್ಯಕ್ಕೆ ಷೇರುಮಾರುಕಟ್ಟೆ ವಹಿವಾಟು ಕೊನೆಗೊಂಡಾಗ ಸೆನ್ಸೆಕ್ಸ್ 38,623.70 ಪಾಯಿಂಟ್ಸ್ ತಲುಪಿದರೆ, ನಿಫ್ಟಿ 11,303.30 ಪಾಯಿಂಟ್ಸ್ ಮುಟ್ಟಿದೆ.
ಲಾಭ ಗಳಿಸಿದ ಕಂಪನಿಯ ಷೇರುಗಳು:
ವೇದಾಂತ, ಜೀ ಎಂಟರ್‌ಟೈನ್‌ಮೆಂಟ್, ಸನ್ ಫಾರ್ಮ, ಟಾಟಾ ಸ್ಟೀಲ್, ಹಿಂಡಲ್ಕೊ, ಸಿಪ್ಲಾ, ಕೋಲ್ ಇಂಡಿಯಾ, ಈಚರ್ ಮೋಟರ್ಸ್, ಜೆಎಸ್‌ಡಬ್ಲ್ಯೂ ಸ್ಟೀಲ್ ಕಂಪನಿಯ ಷೇರುಗಳು 4 ಪರ್ಸೆಂಟ್‌ಗೂ ಅಧಿಕ ಏರಿಕೆ ದಾಖಲಿಸಿದೆ.
ಹಾಗೆಯೇ ಬಜಾಜ್ ಆಟೋ, ಯೆಸ್ ಬ್ಯಾಂಕ್, ಐಟಿಸಿ ಕಂಪನಿ ಷೇರುಗಳು ನಷ್ಟ ಅನುಭವಿಸಿದೆ.


Click it and Unblock the Notifications