ಭಾರತೀಯ ಷೇರುಪೇಟೆ ಶುಕ್ರವಾರ ಇಳಿಮುಖದೊಂದಿಗೆ ವಹಿವಾಟು ಪ್ರಾರಂಭಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಸುಮಾರು 317.96 ಪಾಯಿಂಟ್‌ಗಳಷ್ಟು ಕುಸಿದು 50528.12 ಮಟ್ಟದಲ್ಲಿ ತೆರೆಯಿತು. ಅದೇ ಸಮಯದಲ್ಲಿ, ಎನ್ಎಸ್ಇ ನಿಫ್ಟಿ 96.00 ಪಾಯಿಂಟ್‌ಗಳ ನಷ್ಟದೊಂದಿಗೆ 14984.80 ಪಾಯಿಂಟ್‌ಗಳೊಂದಿಗೆ ವಹಿವಾಟು ಆರಂಭಿಸಿತು.
ಇಂದು, ಬಿಎಸ್‌ಇಯಲ್ಲಿ ಒಟ್ಟು 1,040 ಷೇರುಗಳ ವಹಿವಾಟು ಪ್ರಾರಂಭವಾಯಿತು, ಅದರಲ್ಲಿ ಸುಮಾರು 560 ಷೇರುಗಳು ಏರಿಕೆಗೊಂಡರೆ, 393 ಷೇರುಗಳು ಕುಸಿದವು ಹಾಗೂ ಅದೇ ಸಮಯದಲ್ಲಿ 87 ಕಂಪನಿಗಳ ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆಯಾಗದೆ ಆರಂಭವಾಯಿತು.

ಎಸ್‌ಎಸ್‌ಇನಲ್ಲಿ ಅಪೊಲೊ ಹಾಸ್ಪಿಟಲ್ಸ್, ಅಪೊಲೊ ಟೈಯರ್ಸ್, ಇಂಡಸ್‌ಇಂಡ್ ಬ್ಯಾಂಕ್, ಇಂಡಸ್ ಟವರ್ಸ್, ಕೆನರಾ ಬ್ಯಾಂಕ್, ವಿಪ್ರೋ, ಶೇಕಡಾ 2ಕ್ಕಿಂತ ಹೆಚ್ಚಿನ ಕುಸಿತ ಕಂಡರೆ, ಒಎನ್‌ಜಿಸಿ, ಗೇಲ್, ಅಲ್ಟ್ರಾಟೆಕ್ ಸಿಮೆಂಟ್, ಎಂ&ಎಂ, ಬಿಪಿಸಿಎಲ್, ಮಾರುತಿ ಸುಜುಕಿ, ರಿಲಯನ್ಸ್ ಹಾಗೂ ಹೆಚ್‌ಸಿಎಲ್ ಟೆಕ್ ಏರಿಕೆ ಸಾಧಿಸಿವೆ
ಇನ್ನು ಡಾಲರ್ ಎದುರು ರೂಪಾಯಿ ದುರ್ಬಲಗೊಂಡಿದ್ದು 72.97 ರೂಪಾಯಿಗೆ ಇಳಿಕೆಗೊಂಡಿದೆ. ಗುರುವಾರ ಸೆನ್ಸೆಕ್ಸ್ 598 ಪಾಯಿಂಟ್ಸ್ ಕುಸಿದರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 164 ಪಾಯಿಂಟ್ಸ್ ಇಳಿಕೆ ಸಾಧಿಸಿತ್ತು.


Click it and Unblock the Notifications