ಭಾರತೀಯ ಷೇರುಪೇಟೆಯು ಸೋಮವಾರ ಇಳಿಮುಖದೊಂದಿಗೆ ವಹಿವಾಟು ಅಂತ್ಯಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 397 ಪಾಯಿಂಟ್ಸ್ ಕುಸಿತಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 101 ಪಾಯಿಂಟ್ಸ್ ಇಳಿಕೆಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.78 ಅಥವಾ 397 ಪಾಯಿಂಟ್ಸ್ ಕುಸಿತಗೊಂಡು 50,395 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.67ರಷ್ಟು ಅಥವಾ 101.45 ಪಾಯಿಂಟ್ಸ್ ಕುಸಿದು 14,929.50 ಪಾಯಿಂಟ್ಸ್‌ಗೆ ತಲುಪಿದೆ. ಇಂದು 1210 ಷೇರುಗಳು ಏರಿಕೆಗೊಂಡಿದ್ದು, 1788 ಷೇರುಗಳು ಕುಸಿದಿವೆ ಮತ್ತು 207 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಡಿವಿಸ್ ಲ್ಯಾಬ್ಸ್, ಹೀರೋ ಮೊಟೊಕಾರ್ಪ್, ಕೋಲ್ ಇಂಡಿಯಾ, ಬಜಾಜ್ ಫಿನ್‌ಸರ್ವ್ ಮತ್ತು ಗೇಲ್ ನಿಫ್ಟಿಯಲ್ಲಿ ಪ್ರಮುಖವಾಗಿ ನಷ್ಟಗೊಂಡ ಷೇರುಗಳಾಗಿದ್ದು, ಜೆಎಸ್‌ಡಬ್ಲ್ಯೂ ಸ್ಟೀಲ್, ಟಾಟಾ ಸ್ಟೀಲ್, ಟೆಕ್ ಮಹೀಂದ್ರಾ, ಪವರ್ ಗ್ರಿಡ್ ಕಾರ್ಪ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಏರಿಕೆ ದಾಖಲಿಸಿದೆ.
ಮೆಟಲ್, ಐಟಿ ಮತ್ತು ಪಿಎಸ್‌ಯು ಬ್ಯಾಂಕ್ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಕೊನೆಗೊಂಡಿದ್ದು, ಆಟೊಮೊಬೈಲ್, ಇನ್ಫ್ರಾ ಮತ್ತು ಫಾರ್ಮಾ ವಲಯಗಳು ಮಾರಾಟಕ್ಕೆ ಸಾಕ್ಷಿಯಾಗಿವೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಶೇಕಡಾ 0.5 ರಷ್ಟು ಕಡಿಮೆಯಾಗಿದೆ.
ದೇಶೀಯ ಈಕ್ವಿಟಿ ಮಾರುಕಟ್ಟೆಯಲ್ಲಿ ಮಾರಾಟದ ಮಧ್ಯೆ ಭಾರತೀಯ ರೂಪಾಯಿ ಆರಂಭಿಕ ಲಾಭವನ್ನು ವಿಸ್ತರಿಸಿದೆ ಮತ್ತು ಪ್ರತಿ ಡಾಲರ್‌ಗೆ 33 ಪೈಸೆ ಏರಿಕೆಯಾಗಿ 72.48ಕ್ಕೆ ತಲುಪಿದೆ.


Click it and Unblock the Notifications