ನವದೆಹಲಿ, ಜನವರಿ 25: ಭಾರತೀಯ ಮಾರುಕಟ್ಟೆಯಲ್ಲಿ ಷೇರುಪೇಟೆ ಸತತ ಕುಸಿತ ದಾಖಲಿಸಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 530.95 ಪಾಯಿಂಟ್ ಕುಸಿತ ಕಂಡಿದೆ ಮತ್ತು ರಾಷ್ಟ್ರೀಯ ಷೇರುಪೇಟೆ ನಿಫ್ಟಿ 133 ಪಾಯಿಂಟ್ಸ್ ಇಳಿಕೆಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 530.95 ಪಾಯಿಂಟ್ಸ್ ಅಥವಾ ಶೇಕಡಾ 1.09ರಷ್ಟು ಇಳಿಕೆಗೊಂಡು 48,347.59 ಕ್ಕೆ ಇಳಿದಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 133.00 ಪಾಯಿಂಟ್ ಅಥವಾ ಶೇಕಡಾ 0.93ರಷ್ಟು ಕುಸಿದು 14,238.90 ಕ್ಕೆ ಇಳಿದಿದೆ.
ಇಂದು ಸುಮಾರು 915 ಷೇರುಗಳು ಏರಿಕೆಗೊಂಡರೆ, 2009 ಷೇರುಗಳು ಕುಸಿದಿವೆ ಮತ್ತು 152 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ರಿಲಯನ್ಸ್ ಇಂಡಸ್ಟ್ರೀಸ್, ಇಂಡಸ್ಇಂಡ್ ಬ್ಯಾಂಕ್, ಎಚ್‌ಸಿಎಲ್ ಟೆಕ್ನಾಲಜೀಸ್, ಟಾಟಾ ಮೋಟಾರ್ಸ್ ಮತ್ತು ಈಚರ್ ಮೋಟಾರ್ಸ್ ನಿಫ್ಟಿಯಲ್ಲಿ ಪ್ರಮುಖವಾಗಿ ನಷ್ಟ ಅನುಭವಿಸಿದ ಷೇರುಗಳಾಗಿದ್ದು, ಗ್ರ್ಯಾಸಿಮ್ ಇಂಡಸ್ಟ್ರೀಸ್, ಯುಪಿಎಲ್, ಸಿಪ್ಲಾ, ಹೀರೋ ಮೊಟೊಕಾರ್ಪ್ ಮತ್ತು ಆಕ್ಸಿಸ್ ಬ್ಯಾಂಕ್ ಸೇರಿವೆ.
ಲೋಹ ಮತ್ತು ಫಾರ್ಮಾ ಹೊರತುಪಡಿಸಿ ಎಲ್ಲಾ ಇತರ ವಲಯ ಸೂಚ್ಯಂಕಗಳು ಇಂದು ಕುಸಿತಗೊಂಡಿವೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಶೇಕಡಾ 1ರಷ್ಟು ಪ್ರತಿಶತದಷ್ಟು ಏರಿಕೆಗೊಂಡಿವೆ.


Click it and Unblock the Notifications