ಭಾರತೀಯ ಷೇರುಪೇಟೆಯು ಸತತ ಐದನೇ ಸೆಷನ್ ಕುಸಿತಕ್ಕೆ ಸಾಕ್ಷಿಯಾಗಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 585 ಪಾಯಿಂಟ್ಸ್ ಇಳಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 163 ಪಾಯಿಂಟ್ಸ್ ಕುಸಿದು 14,600 ಪಾಯಿಂಟ್ಸ್‌ಗಿಂತ ಕೆಳಗಿಳಿದಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 1.17ರಷ್ಟು ಅಥವಾ 585 ಪಾಯಿಂಟ್ಸ್ ಇಳಿಕೆಗೊಂಡು 49,216 ಪಾಯಿಂಟ್ಸ್‌ಗೆ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 1.11ರಷ್ಟು ಅಥವಾ 163.45 ಪಾಯಿಂಟ್ಸ್ ಕುಸಿದು 14,557.85 ಮಟ್ಟಕ್ಕೆ ತಲುಪಿದೆ. ಇಂದು 819 ಷೇರುಗಳು ಏರಿಕೆಗೊಂಡರೆ, 2114 ಷೇರುಗಳು ಕುಸಿತಗೊಂಡಿವೆ, 131 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಎಚ್‌ಸಿಎಲ್ ಟೆಕ್ನಾಲಜೀಸ್, ಇನ್ಫೋಸಿಸ್, ಡಾ. ರೆಡ್ಡೀಸ್ ಲ್ಯಾಬೊರೇಟರೀಸ್, ಡಿವಿಸ್ ಲ್ಯಾಬ್ಸ್ ಮತ್ತು ಹೀರೋ ಮೊಟೊಕಾರ್ಪ್ ಪ್ರಮುಖವಾಗಿ ಹೆಚ್ಚು ನಷ್ಟ ಅನುಭವಿಸಿದ ಷೇರುಗಳಾಗಿದ್ದು, ಐಟಿಸಿ, ಬಜಾಜ್ ಆಟೋ, ಹಿಂಡಾಲ್ಕೊ, ಗ್ರಾಸಿಮ್ ಮತ್ತು ಎಂ ಅಂಡ್ ಎಂ ಏರಿಕೆಗೊಂಡಿವೆ.
ಐಟಿ ಸೂಚ್ಯಂಕವು 3 ಪ್ರತಿಶತದಷ್ಟು ಕುಸಿದಿದ್ದರೆ, ಫಾರ್ಮಾ ಸೂಚ್ಯಂಕವು 2 ಪ್ರತಿಶತಕ್ಕಿಂತಲೂ ಕಡಿಮೆಯಾಗಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತಲಾ 1 ಪ್ರತಿಶತದಷ್ಟು ಇಳಿಕೆಗೊಂಡಿವೆ.


Click it and Unblock the Notifications