For Quick Alerts
ALLOW NOTIFICATIONS  
For Daily Alerts

ಏರುತ್ತಲೇ ಸಾಗಿದ್ದ ಸೆನ್ಸೆಕ್ಸ್ 598 ಪಾಯಿಂಟ್ಸ್‌ ಕುಸಿತ: ನಿಫ್ಟಿ 164 ಪಾಯಿಂಟ್ಸ್ ಇಳಿಕೆ

|

ಮೂರು ದಿನಗಳ ಏರಿಕೆ ಹಾದಿಯಲ್ಲಿ ಮುಂದುವರಿದಿದ್ದ ಭಾರತೀಯ ಷೇರುಪೇಟೆ ಗುರುವಾರ ಕುಸಿದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 598 ಪಾಯಿಂಟ್ಸ್‌ ಕುಸಿದರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 164 ಪಾಯಿಂಟ್ಸ್ ಇಳಿಕೆ ಸಾಧಿಸಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 1.16ರಷ್ಟು ಅಥವಾ 598.57 ಪಾಯಿಂಟ್ಸ್ ಇಳಿಕೆಗೊಂಡು 50,846.08 ಪಾಯಿಂಟ್ಸ್‌ ತಲುಪಿದರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಶೇಕಡಾ 1.08ರಷ್ಟು ಅಥವಾ 164.80 ಪಾಯಿಂಟ್ಸ್ ಕುಸಿದು 15,080.80 ಪಾಯಿಂಟ್ಸ್‌ಗೆ ತಲುಪಿದೆ.

ಏರುತ್ತಲೇ ಸಾಗಿದ್ದ ಸೆನ್ಸೆಕ್ಸ್ 598 ಪಾಯಿಂಟ್ಸ್‌ ಕುಸಿತ

''ಯುಎಸ್ ಬಾಂಡ್ ಇಳುವರಿಯ ಹೆಚ್ಚಳವು ತಂತ್ರಜ್ಞಾನದ ಷೇರುಗಳಲ್ಲಿನ ಮಾರಾಟದ ಒತ್ತಡವನ್ನು ಹೆಚ್ಚಿಸಿತು. ಆದರೆ ಮಿಡ್ ಮತ್ತು ಸ್ಮಾಲ್‌ಕ್ಯಾಪ್ಸ್ ತಮ್ಮ ಸಕಾರಾತ್ಮಕ ವೇಗವನ್ನು ಉಳಿಸಿಕೊಂಡಿದೆ'' ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಜೆಎಸ್‌ಡಬ್ಲ್ಯು ಸ್ಟೀಲ್, ಹಿಂಡಾಲ್ಕೊ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ, ಟಾಟಾ ಸ್ಟೀಲ್ ಮತ್ತು ಟಾಟಾ ಮೋಟಾರ್ಸ್ ನಿಫ್ಟಿಯಲ್ಲಿ ಇಳಿಕೆಗೊಂಡ ಅಗ್ರ ಷೇರುಗಳಾಗಿದ್ದು, ಅಲ್ಟ್ರಾಟೆಕ್ ಸಿಮೆಂಟ್, ಶ್ರೀ ಸಿಮೆಂಟ್ಸ್, ಅದಾನಿ ಪೋರ್ಟ್ಸ್, ಗ್ರಾಸಿಮ್ ಇಂಡಸ್ಟ್ರೀಸ್ ಮತ್ತು ಡಾ ರೆಡ್ಡಿ ಲ್ಯಾಬ್ಸ್ ಲಾಭಗಳಿಸಿವೆ.

ಇಂದು ಒಟ್ಟಾರೆ 1580 ಷೇರುಗಳು ಏರಿಕೆಗೊಂಡರೆ, 1350 ಷೇರುಗಳು ಇಳಿಕೆಗೊಂಡಿದ್ದು, 183 ಷೇರುಗಳು ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಎಸಿಸಿ, ಟೊರೆಂಟ್ ಪವರ್, ಕರ್ನಾಟಕ ಬ್ಯಾಂಕ್, ಐಎಫ್‌ಸಿಐ ಸೇರಿದಂತೆ 300 ಕ್ಕೂ ಹೆಚ್ಚು ಷೇರುಗಳು ಬಿಎಸ್‌ಇಯಲ್ಲಿ ಹೊಸ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದೆ.

English summary

Sensex Falls 598 Points: Nifty Ends Below 15,100

Sensex was down 598.57 points or 1.16% at 50,846.08, and the Nifty was down 164.80 points or 1.08%
Story first published: Thursday, March 4, 2021, 18:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X