ಭಾರತೀಯ ಷೇರುಪೇಟೆಯು 2020-21ರ ಹಣಕಾಸು ವರ್ಷದ ಕೊನೆಯ ದಿನ ಅಂದರೆ, ಮಾರ್ಚ್ 31ರಂದು ಇಳಿಮುಖಗೊಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 627 ಪಾಯಿಂಟ್ಸ್ ಕುಸಿದರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 154 ಪಾಯಿಂಟ್ಸ್ ಕುಸಿತಗೊಂಡಿದ್ದು, ಐಟಿ, ಬ್ಯಾಂಕಿಂಗ್ ಮತ್ತು ಎನರ್ಜಿ ಷೇರುಗಳು ಇಳಿಕೆಗೊಂಡಿವೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 627.43 ಪಾಯಿಂಟ್ಸ್ ಅಥವಾ ಶೇಕಡಾ 1.25ರಷ್ಟು ಇಳಿಕೆಗೊಂಡು 49,509.15 ಪಾಯಿಂಟ್ಸ್‌ಗೆ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 154.40 ಪಾಯಿಂಟ್ಸ್ ಅಥವಾ ಶೇಕಡಾ 1.04ರಷ್ಟು ಇಳಿಕೆಗೊಂಡು 14,690.70 ಪಾಯಿಂಟ್ಸ್ ತಲುಪಿದೆ. ಇಂದು 1362 ಷೇರುಗಳು ಏರಿಕೆಗೊಂಡರೆ, 1,470 ಷೇರುಗಳು ಇಳಿಕೆಗೊಂಡಿವೆ ಮತ್ತು 190 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ಟೆಕ್ ಮಹೀಂದ್ರಾ, ಪವರ್ ಗ್ರಿಡ್ ಕಾರ್ಪ್ ಮತ್ತು ಕೋಲ್ ಇಂಡಿಯಾ ನಿಫ್ಟಿಯಲ್ಲಿ ಪ್ರಮುಖವಾಗಿ ನಷ್ಟಗೊಂಡ ಷೇರುಗಳಾಗಿದ್ದು, ಗೇಲ್, ಗ್ರಾಸಿಮ್ ಇಂಡಸ್ಟ್ರೀಸ್, ಬಜಾಜ್ ಫಿನ್‌ಸರ್ವ್, ಯುಪಿಎಲ್ ಮತ್ತು ಐಟಿಸಿ ಲಾಭಗಳಿಸಿವೆ.


Click it and Unblock the Notifications