For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ 50,000 ಗಡಿಯಿಂದ ಕುಸಿಯಲು 5 ಕಾರಣಗಳು

|

ಕೋವಿಡ್-19 ಎರಡನೇ ಸುತ್ತಿನಲ್ಲಿ ಹೆಚ್ಚಾಗುವ ಬೆದರಿಕೆಯು ಮತ್ತು ಲಾಕ್‌ಡೌನ್‌ ಭೀತಿಯು ಭಾರತೀಯ ಷೇರುಪೇಟೆ ಮೇಲೆ ಪರಿಣಾಮ ಬೀರಿದ್ದು, ಸೋಮವಾರ ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರೀ ಕುಸಿತ ಕಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸಕ್ಸ್‌ ಶೇಕಡಾ 2.25ರಷ್ಟು ಅಥವಾ 1,145 ಪಾಯಿಂಟ್ ಕುಸಿದು 49,744.32 ಕ್ಕೆ ಇಳಿದಿದ್ದರೆ, ನಿಫ್ಟಿ 306 ಪಾಯಿಂಟ್ ಅಥವಾ ಶೇಕಡಾ 2.04ರಷ್ಟು ಇಳಿಕೆಗೊಂಡು 14,675.70 ಪಾಯಿಂಟ್ಸ್‌ಗೆ ತಲುಪಿದೆ.

ಮಾಧ್ಯಮ, ಐಟಿ ಮತ್ತು ರಿಯಾಲ್ಟಿಗಳು ಸಾಕಷ್ಟು ಕುಸಿತಕ್ಕೆ ಕಾರಣವಾಗಿದ್ದು, 3 ಪ್ರತಿಶತದಷ್ಟು ನಷ್ಟದೊಂದಿಗೆ ಕೊನೆಗೊಂಡಿವೆ. ಲೋಹದ ಸೂಚ್ಯಂಕವು ಕೇವಲ 1 ಪ್ರತಿಶತಕ್ಕಿಂತ ಹೆಚ್ಚಿನ ಲಾಭದೊಂದಿಗೆ ಹೆಚ್ಚಾಗಿದೆ. ನಿಫ್ಟಿ ಪಿಎಸ್‌ಯು ಬ್ಯಾಂಕ್ ಮತ್ತು ನಿಫ್ಟಿ ಫಾರ್ಮಾ ಸಹ ಶೇ. 3 ರಷ್ಟು ದೌರ್ಬಲ್ಯದಿಂದ ಕೊನೆಗೊಂಡಿತು. ಎಂ & ಎಂ, ಡಾ. ರೆಡ್ಡಿ'ಸ್ ಲ್ಯಾಬ್ಸ್, ಟೆಕ್ ಮಹೀಂದ್ರಾ, ಐಟಿಸಿ ಮತ್ತು ಆಕ್ಸಿಸ್ ಬ್ಯಾಂಕ್ ಮುಂತಾದ ಷೇರುಗಳು ಕೂಡ ಇಳಿಕೆ ಸಾಧಿಸಿವೆ.

 

ಇಂದು ಷೇರುಪೇಟೆ ಬಲವಾದ ಕುಸಿತಕ್ಕೆ ಪ್ರಮುಖ ಐದು ಕಾರಣಗಳು ಈ ಕೆಳಗಿವೆ.

ಕೋವಿಡ್-19 ಆತಂಕ

ಕೋವಿಡ್-19 ಆತಂಕ

ಭಾರತದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಆತಂಕಗಳು ಮಾರುಕಟ್ಟೆಯ ಮನೋಭಾವವನ್ನು ಕುಂದಿಸುತ್ತಿವೆ. ಕಳೆದ ವಾರದಲ್ಲಿ ಕೋವಿಡ್- 19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರವು ರಾಜ್ಯದಲ್ಲಿ ಹೊಸ ನಿರ್ಬಂಧಗಳನ್ನು ಘೋಷಿಸಿದೆ.

ಕಳೆದ ನಾಲ್ಕು ವಾರಗಳಲ್ಲಿ, ರಾಜ್ಯಗಳಲ್ಲಿ ಕೋವಿಡ್-19 ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿರುವ ಪ್ರವೃತ್ತಿಯನ್ನು ತೋರಿಸಿದೆ. ಪಾಸಿಟಿವ್ ಸಂಖ್ಯೆ 18,200 ರಿಂದ 21,300 ಕ್ಕೆ ಏರಿದೆ.

ಪ್ರಮುಖ ಕಂಪನಿಗಳ ಷೇರು ಕುಸಿತ

ಪ್ರಮುಖ ಕಂಪನಿಗಳ ಷೇರು ಕುಸಿತ

ಆರ್‌ಐಎಲ್, ಎಚ್‌ಡಿಎಫ್‌ಸಿ ಒಟ್ಟಾರೆ ಮಾರುಕಟ್ಟೆಯಲ್ಲಿ ತಮ್ಮ ಸಾಮರ್ಥ್ಯದ ಮೂಲಕ ಪ್ರಭಾವ ಬೀರುತ್ತಲೇ ಇರುತ್ತವೆ. ಭವಿಷ್ಯದ ರಿಲಯನ್ಸ್ ರೀಟೇಲ್ ಮತ್ತು ಫ್ಯೂಚರ್ ರೀಟೇಲ್ ನಡುವಿನ ಒಪ್ಪಂದವನ್ನು ಸುಪ್ರೀಂ ಕೋರ್ಟ್ ತಡೆ ಹಿಡಿದು ನಿಲ್ಲಿಸಿದ ನಂತರ ರಿಲಯನ್ಸ್ ಷೇರುಗಳು ಶೇಕಡಾ 2.5 ರಷ್ಟು ನಷ್ಟವನ್ನು ಅನುಭವಿಸಿತು.

ಇನ್ನು ಎಚ್‌ಡಿಎಫ್‌ಸಿ ಷೇರುಗಳು ದಿನದ ಕನಿಷ್ಠ ಬೆಲೆ ಪ್ರತಿ ಷೇರಿಗೆ 2656.6 ರೂ. ಆಗಿದ್ದು ಟಿಸಿಎಸ್ ಕೂಡ ಶೇಕಡಾ 3ಕ್ಕಿಂತ ಹೆಚ್ಚಿನ ಕುಸಿತ ಕಾಣುವ ಮೂಲಕ ಇಳಿಕೆಗೆ ಕಾರಣವಾಗಿದೆ.

ವಿದೇಶಿ ಹೂಡಿಕೆ ಒಳಹರಿವು ಇಳಿಕೆ
 

ವಿದೇಶಿ ಹೂಡಿಕೆ ಒಳಹರಿವು ಇಳಿಕೆ

ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳು ಮತ್ತು ಹೆಚ್ಚಿನ ಮೌಲ್ಯಮಾಪನಗಳ ಬಗೆಗಿನ ಕಳವಳಗಳು ಫಾರಿನ್ ಪೋರ್ಟ್ ಫೋಲಿಯೋ ಇನ್ವೆಸ್ಟರ್ಸ್ (FPI) ಒಳಹರಿವಿನ ಮೇಲೂ ಪರಿಣಾಮ ಬೀರಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ಎಫ್‌ಪಿಐಗಳು ಖರೀದಿಸುತ್ತಿದ್ದರೂ ಸಹ, ಒಳಹರಿವಿನ ವೇಗ ಕಡಿಮೆಯಾಗಿದೆ.

ಹೂಡಿಕೆಯ ದೃಷ್ಟಿಕೋನದಿಂದ ಭಾರತವು ಅತ್ಯುತ್ತಮ ಉದಯೋನ್ಮುಖ ಮಾರುಕಟ್ಟೆಯಲ್ಲಿ ಕಂಡುಬರುತ್ತದೆಯಾದರೂ, ವಿದೇಶಿ ನಿಧಿಗಳು ಭಾರತೀಯ ಮಾರುಕಟ್ಟೆಗಳಲ್ಲಿ ತಮ್ಮ ದಾರಿಯನ್ನು ಕಂಡುಕೊಳ್ಳುವ ವೇಗದಲ್ಲಿ ನಿಧಾನವಾಗುತ್ತಿದೆ. ಎನ್‌ಎಸ್‌ಇಯಲ್ಲಿ ಲಭ್ಯವಿರುವ ತಾತ್ಕಾಲಿಕ ಮಾಹಿತಿಯ ಪ್ರಕಾರ ಎಫ್‌ಪಿಐ ನಿವ್ವಳ ಒಳಹರಿವು ಫೆಬ್ರವರಿ 19 ರಂದು ಭಾರತೀಯ ಷೇರು ಮಾರುಕಟ್ಟೆಯಲ್ಲಿ 118.75 ಕೋಟಿ ರೂ. ನಷ್ಟಿದೆ.

ಜಾಗತಿಕ ಕೊರತೆಯ ಸೂಚನೆಗಳು

ಜಾಗತಿಕ ಕೊರತೆಯ ಸೂಚನೆಗಳು

ಜಾಗತಿಕವಾಗಿ ಹೆಚ್ಚಾದ ಕೊರತೆಯ ಸೂಚನೆಗಳು ಸಹ ಹೂಡಿಕೆದಾರರ ಮನೋಭಾವವನ್ನು ತೀವ್ರವಾಗಿ ಹಿಮ್ಮೆಟ್ಟುವಂತೆ ಮಾಡಿದೆ . ರಾಯಿಟರ್ಸ್ ಪ್ರಕಾರ, ಏಷ್ಯಾದ ಷೇರುಗಳು ಸೋಮವಾರ ಜಾಗತಿಕವಾಗಿ ಹಣದುಬ್ಬರ ಮತ್ತು ಅಮೆರಿಕಾ ಬಾಂಡ್‌ಗಳ ನಿರೀಕ್ಷೆಯು ಹೆಚ್ಚಾಗಿರುವಂತೆ ನೈಜ ಇಳುವರಿ ಈಕ್ವಿಟಿ ಮೌಲ್ಯಮಾಪನಗಳನ್ನು ಹೋಲಿಸಿದರೆ ಹೆಚ್ಚು ವಿಸ್ತರಿಸಿದೆ.

ತೈಲ ದರ ತೀವ್ರ ಏರಿಕೆ

ತೈಲ ದರ ತೀವ್ರ ಏರಿಕೆ

ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚು ಅವಲಂಬಿತ ರಾಷ್ಟ್ರವಾಗಿರುವ ಭಾರತದಲ್ಲಿ , ಅದರ ಮೇಲಿನ ಬೆಲೆ ಹೆಚ್ಚಳವು ತೀವ್ರ ಪರಿಣಾಮವನ್ನು ಎದುರಿಸುವಂತೆ ಮಾಡಿದೆ. ಕಳೆದ ವಾರ ಸುಮಾರು ಶೇಕಡಾ 1ರಷ್ಟು ಏರಿಕೆ ಕಂಡ ನಂತರ, ಬ್ರೆಂಟ್ ಕಚ್ಚಾ ತೈಲ ದರವು 76 ಸೆಂಟ್ಸ್ ಅಥವಾ ಶೇಕಡಾ 1.2ರಷ್ಟ ಹೆಚ್ಚಾಗಿ ಬ್ಯಾರೆಲ್‌ಗೆ 61.67 ಡಾಲರ್‌ಗೆ ತಲುಪಿದೆ. ಯುಎಸ್ ತೈಲವು 74 ಸೆಂಟ್ಸ್ ಅಥವಾ ಶೇಕಡಾ 1.3ರಷ್ಟು ಏರಿಕೆಯಾಗಿ ಬ್ಯಾರೆಲ್‌ಗೆ 59.98 ಡಾಲರ್‌ಗೆ ತಲುಪಿದೆ.

ಇದರ ಜೊತೆಗೆ ಈ ತೈಲ ಬೆಲೆ ಷೇರು ಮಾರುಕಟ್ಟೆಗಳೊಂದಿಗೆ ನಕಾರಾತ್ಮಕ ಸಂಬಂಧವನ್ನು ಹಂಚಿಕೊಳ್ಳುತ್ತದೆ. ಕಂಪನಿಗಳಾದ ಟೈರ್, ರಿಫೈನರಿ, ಏರ್‌ಲೈನ್ಸ್‌, ಲಾಜಿಸ್ಟಿಕ್ಸ್ ಕಾರ್ಯಾಚರಣೆ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಹೀಗಾಗಿ, ಕಚ್ಚಾ ತೈಲ ಬೆಲೆಗಳ ಕುಸಿತವು ಈ ಕಂಪನಿಗಳ ಷೇರುಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

English summary

Sensex Falls Over 1000 Points: Nifty Slips Below 14,650

Sensex was 1,145 points, or 2.25 percent, down at 49,744.32 while Nifty was 306 points, or 2.04 percent lower at 14,675.70. Five reasons here
Story first published: Monday, February 22, 2021, 17:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X