ಭಾರತೀಯ ಷೇರುಪೇಟೆ ಸೋಮವಾರ ಭಾರೀ ಕುಸಿತಕ್ಕೆ ಸಾಕ್ಷಿಯಾಗಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 1000 ಪಾಯಿಂಟ್ಸ್ ಕುಸಿತ ಕಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 270 ಪಾಯಿಂಟ್ಸ್ ನಷ್ಟಕ್ಕೆ ಕಾರಣವಾಗಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಮಧ್ಯಾಹ್ನ 3 ಗಂಟೆ ಸುಮಾರಿಗೆ 1013 ಪಾಯಿಂಟ್ಸ್ ಕುಸಿದು 49,875 ಪಾಯಿಂಟ್ಸ್ ತಲುಪಿತ್ತು. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 266 ಪಾಯಿಂಟ್ಸ್ ಇಳಿಕೆಗೊಂಡು 14,711 ಪಾಯಿಂಟ್ಸ್‌ಗೆ ತಲುಪಿದೆ.

ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇಕಡಾ 1.34 ಮತ್ತು 0.95 ರಷ್ಟು ಕುಸಿದಿದ್ದರಿಂದ ಮಿಡ್ ಮತ್ತು ಸ್ಮಾಲ್-ಕ್ಯಾಪ್ಸ್ ಉತ್ತಮವಾಗಿದೆ.
ಭಾರತದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಆತಂಕಗಳು ಮಾರುಕಟ್ಟೆಯ ಮನೋಭಾವವನ್ನು ಕುಂದಿಸುತ್ತಿವೆ. ಕಳೆದ ವಾರದಲ್ಲಿ ಕೋವಿಡ್- 19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರವು ರಾಜ್ಯದಲ್ಲಿ ಹೊಸ ನಿರ್ಬಂಧಗಳನ್ನು ಘೋಷಿಸಿದೆ.
ಕಳೆದ ನಾಲ್ಕು ವಾರಗಳಲ್ಲಿ, ಹಲವು ರಾಜ್ಯಗಳಲ್ಲಿ ಕೋವಿಡ್-19 ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿರುವ ಪ್ರವೃತ್ತಿಯನ್ನು ತೋರಿಸಿದೆ.
ದಿನದ ವಹಿವಾಟು ಅಂತ್ಯಕ್ಕೆ ಸೆನ್ಸಕ್ಸ್ 1,145 ಪಾಯಿಂಟ್ ಅಥವಾ ಶೇಕಡಾ 2.25ರಷ್ಟು ಕುಸಿದು 49,744.32 ಕ್ಕೆ ಇಳಿದಿದ್ದರೆ, ನಿಫ್ಟಿ 306 ಪಾಯಿಂಟ್ ಅಥವಾ ಶೇಕಡಾ 2.04ರಷ್ಟು ಇಳಿಕೆಗೊಂಡು 14,675.70 ಪಾಯಿಂಟ್ಸ್‌ಗೆ ತಲುಪಿದೆ.


Click it and Unblock the Notifications