ಭಾರತೀಯ ಷೇರುಪೇಟೆ ಶುಕ್ರವಾರ ಸಾಕಷ್ಟು ಏರಿಳಿತಗಳ ನಡುವೆ ಸಮತಟ್ಟಾಗಿ ಮುಂದುವರಿದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 28 ಪಾಯಿಂಟ್ಸ್ ಹೆಚ್ಚಳಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 36.40 ಪಾಯಿಂಟ್ ಹೆಚ್ಚಾಗಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 28.35 ಪಾಯಿಂಟ್ ಅಥವಾ ಶೇಕಡಾ 0.06ರಷ್ಟು ಹೆಚ್ಚಾಗಿ 48,832.03 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 36.40 ಪಾಯಿಂಟ್ ಅಥವಾ ಶೇಕಡಾ 0.25ರಷ್ಟು ಹೆಚ್ಚಾಗಿ 14,617.90 ಪಾಯಿಂಟ್ಸ್ ತಲುಪಿದೆ.

ಇಂದು ಸುಮಾರು 1,617 ಷೇರುಗಳು ಏರಿಕೆಗೊಂಡರೆ, 1,230 ಷೇರುಗಳು ಕುಸಿದವು, ಮತ್ತು 152 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಎನ್‌ಎಸ್‌ಇನಲ್ಲಿ ವಿಪ್ರೋ, ಹಿಂಡಾಲ್ಕೊ ಇಂಡಸ್ಟ್ರೀಸ್, ಸಿಪ್ಲಾ, ಏಷ್ಯನ್ ಪೇಂಟ್ಸ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಹೆಚ್ಚಿನ ಲಾಭ ಗಳಿಸಿದವ ಷೇರುಗಳಾಗಿದ್ದು, ಜೆಎಸ್‌ಡಬ್ಲ್ಯೂ ಸ್ಟೀಲ್, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್, ಲಾರ್ಸೆನ್ ಮತ್ತು ಟೌಬ್ರೊ ಮತ್ತು ಟಾಟಾ ಸ್ಟೀಲ್ ನಷ್ಟ ಅನುಭವಿಸಿದೆ. ಇಂದು ಹಣಕಾಸು ಸಂಬಂಧಿತ ಷೇರುಗಳನ್ನು ಹೊರತುಪಡಿಸಿ ಬಹುತೇಕ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಕೊನೆಗೊಂಡಿವೆ.
ಇನ್ನು ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿಯ ಮಧ್ಯೆ ಭಾರತೀಯ ರೂಪಾಯಿ ಆರಂಭಿಕ ಲಾಭವನ್ನು ವಿಸ್ತರಿಸಿ ದಿನದ ಗರಿಷ್ಠ 74.35 ರೂಪಾಯಿಗೆ ಕೊನೆಗೊಂಡಿತು.


Click it and Unblock the Notifications