ಭಾರತೀಯ ಷೇರುಪೇಟೆ ಬುಧವಾರ ಮತ್ತಷ್ಟು ಎತ್ತರಕ್ಕೆ ಜಿಗಿದಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 254 ಪಾಯಿಂಟ್ಸ್ ಏರಿಕೆಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 76 ಪಾಯಿಂಟ್ಸ್ ಹೆಚ್ಚಳಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.50ರಷ್ಟು ಅಥವಾ 254.03 ಪಾಯಿಂಟ್ಸ್ ಏರಿಕೆಗೊಂಡು 51,279.51 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.51ರಷ್ಟು ಅಥವಾ 76.40 ಪಾಯಿಂಟ್ಸ್ ಏರಿಕೆಗೊಂಡು 15,174.80 ಪಾಯಿಂಟ್ಸ್ ಮುಟ್ಟಿದೆ.

ಇಂದು ಸುಮಾರು 1,609 ಷೇರುಗಳು ಏರಿಕೆಗೊಂಡರೆ, 1,322 ಷೇರುಗಳು ಕುಸಿದವು, ಮತ್ತು 170 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಜೆಎಸ್‌ಡಬ್ಲ್ಯು ಸ್ಟೀಲ್, ಈಷರ್ ಮೋಟಾರ್ಸ್, ಟಾಟಾ ಸ್ಟೀಲ್, ಬಜಾಜ್ ಫೈನಾನ್ಸ್ ಮತ್ತು ಸನ್ ಫಾರ್ಮಾ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಎಸ್‌ಬಿಐ ಲೈಫ್ ಇನ್ಶುರೆನ್ಸ್, ಒಎನ್‌ಜಿಸಿ, ಐಒಸಿ, ಎಚ್‌ಡಿಎಫ್‌ಸಿ ಲೈಫ್ ಮತ್ತು ಗೇಲ್ ನಷ್ಟ ಅನುಭವಿಸಿವೆ.
ನಿಫ್ಟಿ ಫಾರ್ಮಾ, ಐಟಿ, ಆಟೊಮೊಬೈಲ್ ಮತ್ತು ಮೆಟಲ್ ಸೂಚ್ಯಂಕಗಳು ತಲಾ ಶೇಕಡಾ 1ರಷ್ಟು ಏರಿಕೆಯಾಗಿದ್ದರೆ, ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಹೆಚ್ಚಿನ ಮಟ್ಟದಲ್ಲಿ ಕೊನೆಗೊಂಡಿವೆ.


Click it and Unblock the Notifications