For Quick Alerts
ALLOW NOTIFICATIONS  
For Daily Alerts

Closing Bell: ಸೆನ್ಸೆಕ್ಸ್ 272 ಪಾಯಿಂಟ್ಸ್‌ ಏರಿಕೆ, ನಿಫ್ಟಿ 106 ಪಾಯಿಂಟ್ಸ್‌ ಹೆಚ್ಚಳ

|

ಭಾರತೀಯ ಷೇರುಪೇಟೆ ಗುರುವಾರ ಸಾಕಷ್ಟು ಏರಿಳಿತಗಳ ಬಳಿಕ ಏರಿಕೆಯೊಂದಿಗೆ ಕೊನೆಗೊಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 272 ಪಾಯಿಂಟ್ಸ್‌ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 106 ಪಾಯಿಂಟ್ಸ್‌ ಹೆಚ್ಚಳಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.56ರಷ್ಟು ಅಥವಾ 272.21 ಪಾಯಿಂಟ್ಸ್‌ ಏರಿಕೆಗೊಂಡು 48949.76 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.73ರಷ್ಟು ಅಥವಾ 106.95 ಪಾಯಿಂಟ್ಸ್‌ ಹೆಚ್ಚಾಗಿ 14724.80 ಪಾಯಿಂಟ್ಸ್‌ ಮುಟ್ಟಿದೆ.

Closing Bell: ಸೆನ್ಸೆಕ್ಸ್ 272 ಪಾಯಿಂಟ್ಸ್‌ ಏರಿಕೆ

ಏರಿಕೆಗೊಂಡ ಪ್ರಮುಖ ಷೇರುಗಳು:

ಹಿಂಡಾಲ್ಕೊ ಷೇರುಗಳು ಸುಮಾರು 19 ರೂ.ಗಳ ಏರಿಕೆ ಕಂಡು 385.95 ರೂ., ಹೀರೋ ಮೊಟೊಕಾರ್ಪ್ ಷೇರುಗಳು ತಲಾ 125 ರೂ.ಗಳ ಏರಿಕೆ ಕಂಡು 2,913.30 ರೂ., ವಿಪ್ರೋ ಷೇರುಗಳು ಸುಮಾರು 22 ರೂ.ಗಳ ಏರಿಕೆ ಕಂಡು 512.30 ರೂ., ಟಾಟಾ ಮೋಟಾರ್ಸ್ ಷೇರುಗಳು ಸುಮಾರು 10 ರೂ.ಗಳ ಏರಿಕೆ ಕಂಡು 301.25 ರೂ., ಈಚರ್ ಮೋಟಾರ್ಸ್ ಷೇರುಗಳು ಸುಮಾರು 71 ರೂ.ಗಳ ಏರಿಕೆ ಕಂಡು 2,443.25 ರೂ. ತಲುಪಿದೆ.

ಇಳಿಕೆಗೊಂಡ ಪ್ರಮುಖ ಷೇರುಗಳು:
ಪವರ್ ಗ್ರಿಡ್ ಕಾರ್ಪೊರೇಶನ್‌ನ ಷೇರುಗಳು ಸುಮಾರು 3 ರೂ.ಗಳ ಕುಸಿತದಿಂದ 215.40 ರೂ., ಯುಪಿಎಲ್ ಷೇರುಗಳು ಸುಮಾರು 8 ರೂ.ಗಳಷ್ಟು ಇಳಿಕೆಯಾಗಿ 633.00 ರೂ., ಎನ್‌ಟಿಪಿಸಿ ಷೇರುಗಳು ಸುಮಾರು 1 ರೂ.ಗೆ ಇಳಿದು 103.05 ರೂ., ಬಜಾಜ್ ಫಿನ್‌ಸರ್ವ್ ಷೇರು 11,027.95 ರೂ.ಗೆ ತಲುಪಿದ್ದು, ,ಒಎನ್‌ಜಿಸಿ ಷೇರುಗಳು ಸುಮಾರು 1 ರೂ.ಗೆ ಇಳಿದು 110.25 ರೂ. ತಲುಪಿದೆ.

English summary

Sensex Gains 272 Points: Nifty Closes Above 14700

Sensex rallied 272.21 points to close at 48,949.76, and the Nifty50 was up 106.90 points at 14,724.80.
Story first published: Thursday, May 6, 2021, 16:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X