For Quick Alerts
ALLOW NOTIFICATIONS  
For Daily Alerts

ಚೇತರಿಕೆ ಕಂಡ ಭಾರತದ ಷೇರುಪೇಟೆ:ಸೆನ್ಸೆಕ್ಸ್ 500 ಪಾಯಿಂಟ್ಸ್ ಏರಿಕೆ, ಯೆಸ್‌ ಬ್ಯಾಂಕ್ ಭರ್ಜರಿ ಕಂಬ್ಯಾಕ್

|

ಸೋಮವಾರ ಭಾರೀ ಇಳಿಕೆ ಕಂಡಿದ್ದ ಭಾರತದ ಷೇರುಪೇಟೆ ಮಂಗಳವಾರ (ಮಾರ್ಚ್ 17) ರಂದು ಮಾರುಕಟ್ಟೆ ವಹಿವಾಟಿನ ಆರಂಭದಲ್ಲಿ ಚೇತರಿಕೆ ಕಂಡಿದೆ. ಸೆನ್ಸೆಕ್ಸ್ 500 ಅಧಿಕ ಪಾಯಿಂಟ್ಸ್ ಏರಿಕೆ ದಾಖಲಿಸಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 9300ರ ಗಡಿ ದಾಟಿದೆ.

ಷೇರುಪೇಟೆಯಲ್ಲಿ ಮತ್ತೆ ಕರಡಿ ಕುಣಿತ:ಸೆನ್ಸೆಕ್ಸ್ 2,713 ಪಾಯಿಂಟ್ಸ್ ಖಲ್ಲಾಸ್ಷೇರುಪೇಟೆಯಲ್ಲಿ ಮತ್ತೆ ಕರಡಿ ಕುಣಿತ:ಸೆನ್ಸೆಕ್ಸ್ 2,713 ಪಾಯಿಂಟ್ಸ್ ಖಲ್ಲಾಸ್

ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 500 ಪಾಯಿಂಟ್ಸ್‌ಗಳನ್ನು ದಾಟಿ 32,012 ವರೆಗೂ ಪಾಯಿಂಟ್ಸ್ ಮುಟ್ಟಿತ್ತು. ಇನ್ನು ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 169 ಪಾಯಿಂಟ್ಸ್ ಏರಿಕೆಗೊಂಡು 9,370 ಪಾಯಿಂಟ್ಸ್ ದಾಖಲಾಗಿದೆ.

ಚೇತರಿಕೆ ಕಂಡ ಭಾರತದ ಷೇರುಪೇಟೆ: ಸೆನ್ಸೆಕ್ಸ್ 500 ಪಾಯಿಂಟ್ಸ್ ಏರಿಕೆ

ಬುಧವಾರ ಸಂಜೆ 6 ಗಂಟೆಯಿಂದ ಯೆಸ್ ಬ್ಯಾಂಕ್ ಮೇಲಿನ ನಿರ್ಬಂಧ ಮುಕ್ತಗೊಳಿಸಲಾಗುವುದು ಎಂದು ಆರ್‌ಬಿಐ ಸೋಮವಾರ ಹೇಳಿದ ಬಳಿಕ ಯೆಸ್ ಬ್ಯಾಂಕ್ ಷೇರುಗಳ ಮೌಲ್ಯ ಏರಿಕೆಗೊಂಡಿದೆ. 60 ಪರ್ಸೆಂಟ್‌ನಷ್ಟು ಏರಿಕೆಗೊಂಡಿರುವ ಯೆಸ್ ಬ್ಯಾಂಕ್ ಪ್ರತಿ ಷೇರಿನ ಮೌಲ್ಯ 60 ರುಪಾಯಿ ಗಡಿ ಮುಟ್ಟಿದೆ. ಸೋಮವಾರ ವಹಿವಾಟು ಕೊನೆಗೊಂಡಾಗ ಷೇರಿನ ಮೌಲ್ಯ 37.10 ರುಪಾಯಿ ಇತ್ತು.

ಹೆಚ್ಚು ಏರಿಕೆ ದಾಖಲಿಸಿರುವ ಕಂಪನಿಯ ಷೇರುಗಳು:

ಯೆಸ್ ಬ್ಯಾಂಕ್ , ಕೋಲ್ ಇಂಡಿಯಾ, ಪವರ್‌ಗ್ರಿಡ್ ಕಾರ್ಪ್, ಅದಾನಿ ಪೋರ್ಟ್ಸ್, ವೇದಾಂತ, ಸನ್‌ಫಾರ್ಮಾ, ಹೆಚ್‌ಯುಎಲ್, ಹೆಚ್‌ಸಿಎಲ್‌ ಟೆಕ್, ಐಟಿಸಿ, ಈಚರ್ ಮೋಟಾರ್ಸ್

English summary

Sensex Gains 500 Points Yes Bank Rises 60 Percent

On tuesday india's share market sensex rises 500 points , yes bank share rises 60 percent
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X