For Quick Alerts
ALLOW NOTIFICATIONS  
For Daily Alerts

Closing Bell: ಸೆನ್ಸೆಕ್ಸ್ 568 ಪಾಯಿಂಟ್ಸ್ ಏರಿಕೆ: 182 ಪಾಯಿಂಟ್ಸ್ ಹೆಚ್ಚಾದ ನಿಫ್ಟಿ

|

ಭಾರತೀಯ ಷೇರುಪೇಟೆಯು ಶುಕ್ರವಾರ ಚೇತರಿಕೆ ಕಂಡಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ ದಿನದ ವಹಿವಾಟು ಅಂತ್ಯಕ್ಕೆ 568 ಪಾಯಿಂಟ್ಸ್‌ ಹೆಚ್ಚಾಗಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 182 ಪಾಯಿಂಟ್ಸ್‌ ಏರಿಕೆಗೊಂಡಿದೆ.

ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್‌ ಶೇಕಡಾ 1.17ರಷ್ಟು ಅಥವಾ 568.38 ಪಾಯಿಂಟ್ಸ್‌ ಏರಿಕೆಗೊಂಡು 49,008.50 ಪಾಯಿಂಟ್ಸ್‌ಗೆ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 1.27ರಷ್ಟು ಅಥವಾ 182.40 ಪಾಯಿಂಟ್ಸ್ ಏರಿಕೆಗೊಂಡು 14,507.30 ಪಾಯಿಂಟ್ಸ್‌ಗೆ ತಲುಪಿದೆ.

ಸೆನ್ಸೆಕ್ಸ್ 568 ಪಾಯಿಂಟ್ಸ್ ಏರಿಕೆ: 182 ಪಾಯಿಂಟ್ಸ್ ಹೆಚ್ಚಾದ ನಿಫ್ಟಿ

ಇಂದು 1,633 ಷೇರುಗಳು ಏರಿಕೆಗೊಂಡರೆ, 1,283 ಷೇರುಗಳು ಕುಸಿತಗೊಂಡಿವೆ ಮತ್ತು 167 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಎನ್‌ಎಸ್‌ಇನಲ್ಲಿ ಟಾಟಾ ಸ್ಟೀಲ್, ಬಜಾಜ್ ಫಿನ್‌ಸರ್ವ್, ಏಷ್ಯನ್ ಪೇಂಟ್ಸ್, ಹಿಂಡಾಲ್ಕೊ ಇಂಡಸ್ಟ್ರೀಸ್ ಮತ್ತು ಟಾಟಾ ಮೋಟಾರ್ಸ್ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಯುಪಿಎಲ್, ಈಚರ್ ಮೋಟಾರ್ಸ್, ಪವರ್ ಗ್ರಿಡ್ ಕಾರ್ಪ್, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಐಟಿಸಿ ನಷ್ಟಗೊಂಡಿವೆ.

ಇನ್ನು ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿಯ ಮಧ್ಯೆ ಭಾರತೀಯ ರೂಪಾಯಿ ಮೌಲ್ಯ 11 ಡಾಲರ್ ಏರಿಕೆಯಾಗಿ, ಪ್ರತಿ ಡಾಲರ್‌ಗೆ 72.51 ರೂಪಾಯಿಗೆ ತಲುಪಿದೆ.

English summary

Sensex Gains 568 Points: Nifty Ends Above 14,500

Sensex was up 568.38 points or 1.17% at 49,008.50, while the Nifty was up 182.40 points or 1.27% at 14,507.30.
Story first published: Friday, March 26, 2021, 16:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X