ಭಾರೀ ಕುಸಿತ ಕಂಡಿದ್ದ ಷೇರುಪೇಟೆ ಸೋಮವಾರ ಚೇತರಿಕೆ ಕಂಡಿದ್ದು ಸೆನ್ಸೆಕ್ಸ್ 600 ಅಂಶಗಳಷ್ಟು ಏರಿಕೆ ದಾಖಲಿಸಿದೆ. ಕೇವಲ ಹತ್ತು ನಿಮಿಷಗಳಲ್ಲಿ ಹೂಡಿಕೆದಾರರ ಸಂಪತ್ತು 2 ಲಕ್ಷ ಕೋಟಿಯಷ್ಟು ಹೆಚ್ಚಾಗಿದೆ.
ರಾಷ್ಟ್ರೀಯ ಷೇರುಪೇಟೆ(ಎನ್‌ಎಸ್ಇ) ಸೂಚ್ಯಂಕ ನಿಫ್ಟಿ ಸೋಮವಾರ ಆರಂಭದಲ್ಲೇ ಭರ್ಜರಿ ಆರಂಭ ದಾಖಲಿಸಿತು 11,201.75 ಅಂಶಗಳಿಗೆ ಕೊನೆಗೊಂಡಿದ್ದ ಎನ್‌ಎಸ್‌ಇ 166 ಅಂಶಗಳು ಏರಿಕೆಗೊಂಡು 11,365.45 ಅಂಶಗಳನ್ನು ತಲುಪಿದೆ. ಇನ್ನು ಸೆನ್ಸೆಕ್ಸ್ 611.49 ಅಂಶಗಳು ಏರಿಕೆಗೊಂಡಿದ್ದು, 38,870.05 ಅಂಶಗಳವರೆಗೂ ತಲುಪಿದೆ.

ಟಿಸಿಎಸ್, ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್, ವೇದಾಂತ, ಐಒಸಿ, ಜೀ ಎಂಟರ್‌ಟೈನ್‌ಮೆಂಟ್, ಕೋಲ್ ಇಂಡಿಯಾ ಷೇರುಗಳು 3 ಪರ್ಸೆಂಟ್‌ಗಿಂತ ಹೆಚ್ಚಿನ ಏರಿಕೆ ದಾಖಲಿಸಿದೆ. ಬಜಾಜ್ ಆಟೋ, ಕೋಟಕ್ ಮಹೀಂದ್ರಾ, ಹೀರೋ ಮೋಟೊಕಾಪ್ ಷೇರುಗಳು ಇಳಿಕೆ ಕಂಡಿವೆ.
ಶುಕ್ರವಾರ (ಫೆಬ್ರವರಿ 28) ಷೇರು ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದ ಕುಸಿತ ದಾಖಲಾಗಿತ್ತು. ಸೆನ್ಸೆಕ್ಸ್ 1,448.37 ಅಂಶಗಳ ಇಳಿಕೆಯೊಂದಿಗೆ 38,297.29 ಅಂಶಗಳನ್ನು ತಲುಪಿದೆ. ರಾಷ್ಟ್ರೀಯ ಷೇರು ಪೇಟೆ ನಿಫ್ಟಿ 431.55 ಅಂಶಗಳ ಕುಸಿತದ ಮೂಲಕ 11,201.75 ಅಂಶಗಳನ್ನು ಮುಟ್ಟಿತ್ತು. ಜೊತೆಗೆ ಕೇವಲ ಐದು ದಿನದಲ್ಲಿ ಸೆನ್ಸೆಕ್ಸ್ 3000 ಪಾಯಿಂಟ್ಸ್ ಇಳಿಕೆ ಕಂಡು, ಬರೋಬ್ಬರಿ 12 ಲಕ್ಷ ಕೋಟಿ ರುಪಾಯಿ ಸಂಪತ್ತು ಕರಗಿ ಹೋಗಿತ್ತು.


Click it and Unblock the Notifications