ಮೊಟ್ಟ ಮೊದಲ ಬಾರಿಗೆ 41,000 ಗಡಿ ದಾಟಿದ ಸೆನ್ಸೆಕ್ಸ್
ಮಂಗಳವಾರ ಷೇರುಪೇಟೆಯಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಮುಂಬೈ ಷೇರು ಮಾರುಕಟ್ಟೆ (ಬಿಎಸ್ಐ) 218 ಅಂಶಗಳ ಏರಿಕೆಯೊಂದಿಗೆ ಇದೇ ಮೊದಲ ಬಾರಿಗೆ 41,000 ಅಂಶಗಳ ಗಡಿ ದಾಟಿದೆ.
ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ ಶೇಕಡಾ 0.53ರಷ್ಟು ಏರಿಕೆ ದಾಖಲಿಸಿ 41,108 ಅಂಶ ಗಳಿಸಿತು. ರಾಷ್ಟ್ರೀಯ ಷೇರುಪೇಟೆ(ಎನ್‌ಎಸ್ಇ) ಸೂಚ್ಯಂಕ ನಿಫ್ಟಿ ಕೂಡ 56 ಅಂಶಗಳು ಜಿಗಿದು 12,130 ಅಂಶಗಳಿಗೆ ತಲುಪಿದೆ.

ಯೆಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಟಾಟಾ ಸ್ಟೀಲ್, ಓನ್‌ಜಿಸಿ, ಎಸ್‌ಬಿಐ, ಏಷ್ಯನ್ ಪೈಂಟ್ಸ್, ಮತ್ತು ಸನ್ ಫಾರ್ಮ 2.83 ಪರ್ಸೆಂಟ್ ಏರಿಕೆ ದಾಖಲಿಸಿವೆ. ಮತ್ತೊಂದೆಡೆ ಭಾರತಿ ಏರ್‌ಟೆಲ್, ಪವರ್‌ಗ್ರಿಡ್, L&T, ಮತ್ತು ಟಿಸಿಎಸ್ ಕಂಪನಿಯ ಷೇರುಗಳು 2.71 ಪರ್ಸೆಂಟ್ ಕುಸಿತ ಕಂಡಿವೆ.
ಅಮೆರಿಕಾ-ಚೀನಾ ವ್ಯಾಪಾರ ಒಪ್ಪಂದದ ಭರವಸೆಯ ಮಧ್ಯೆ, ಸೂಚ್ಯಂಕಗಳು ಉತ್ತಮ ವಹಿವಾಟು ನಡೆಸುತ್ತಿವೆ ಎಂದು ಷೇರುಪೇಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.


Click it and Unblock the Notifications