ವಿದೇಶಿ ಹೂಡಿಕೆದಾರರ ಪ್ರಮಾಣವು ಅಧಿಕವಾಗುತ್ತಾ ಸಾಗಿದ್ದಂತೆ ಜೂನ್ 28 ರಂದು ಭಾರತೀಯ ಷೇರು ಮಾರುಕಟ್ಟೆಯು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಸೆನ್ಸೆಕ್ಸ್ ಮೊದಲ ಬಾರಿಗೆ 64,000 ಅಂಕಕ್ಕಿಂತ ಅಧಿಕವಾಗಿದ್ದು, 64,012.16ಕ್ಕೆ ತಲುಪಿದೆ. ನಿಫ್ಟಿ ಕೂಡಾ ಸಾರ್ವಕಾಲಿಕ ಏರಿಕೆಯನ್ನು ಕಂಡಿದ್ದು, 19,003.20ಕ್ಕೆ ತಲುಪಿದೆ. ಜೂನ್ 28ರಂದು ಮಧ್ಯಾಹ್ನ 1.30ರ ಸಮಯಕ್ಕೆ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್, ನಿಫ್ಟಿ ಹೆಚ್ಚಳವಾಗಿದೆ.
ಸೆನ್ಸೆಕ್ಸ್ ಶೇಕಡ 0.88 ಅಥವಾ 561 ಅಂಕ ಏರಿಕೆಯಾಗಿದ್ದು, ಸುಮಾರು 63,977ಕ್ಕೆ ತಲುಪಿದೆ. ನಿಫ್ಟಿ ಸುಮಾರು ಶೇಕಡ 0.94ರಷ್ಟು ಅಥವಾ 177 ಅಂಕದಷ್ಟು ಹೆಚ್ಚಳವಾಗಿ, 18,994.74ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 50 ಸುಮಾರು 142 ದಿನಗಳ ವಹಿವಾಟಿನ ನಂತರ ಹೊಸ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಐತಿಹಾಸಿಕವಾಗಿ ನಿಫ್ಟಿಯು 2000ನೇ ಇಸವಿಯಲ್ಲಿ ಸಾರ್ವಕಾಲಿಕವಾಗಿ ಏರಿಕೆಯಾಗಿದೆ. ಇನ್ನು ಜನವರಿ 2008 ಮತ್ತು ಮಾರ್ಚ್ 2015 ರ ನಡುವಿನ ಅವಧಿಯಲ್ಲಿ ಷೇರುಪೇಟೆಯಲ್ಲಿ ಅಧಿಕವಾಗಿ ಕರಡಿ ಕುಣಿತ ಕಂಡು ಬಂದಿದೆ.

ಎಂಒಎಫ್‌ಎಸ್‌ಎಲ್‌ನ ರಿಟೇಲ್ ರಿಸರ್ಚ್, ಬ್ರೋಕಿಂಗ್ ಮತ್ತು ವಿತರಣೆಯ ಮುಖ್ಯಸ್ಥ ಸಿದ್ಧಾರ್ಥ ಖೇಮ್ಕಾ, "ಕಳೆದ ಕೆಲವು ದಿನಗಳಲ್ಲಿ ಹಲವಾರು ಏರಿಳಿತಗಳ ನಂತರ ನಿಫ್ಟಿ ಅಂತಿಮವಾಗಿ ಅದರ ಹಿಂದಿನ ಗರಿಷ್ಠ ಮಟ್ಟವನ್ನು ದಾಟುವಲ್ಲಿ ಯಶಸ್ವಿಯನ್ನು ಕಂಡಿದೆ. ಪ್ರಸ್ತುತ ಮಾರುಕಟ್ಟೆಯ ಬೆಳವಣಿಗೆಯನ್ನು ನೋಡಿದಾಗ ನಾವು ಹೊಸ ಗರಿಷ್ಠ ಮಟ್ಟವನ್ನು ದಾಟಿದೆ," ಎಂದು ತಿಳಿಸಿದ್ದಾರೆ. ಹಾಗಾದರೆ ಷೇರುಪೇಟೆಯಲ್ಲಿ ಈ ಗೂಳಿಯಾಟ ಮುಂದುವರಿಯಲಿದೆ ಎಂದು ತಿಳಿಯೋಣ ಮುಂದೆ ಓದಿ...
ಎಫ್‌ಐಐ ಖರೀದಿ
ವಿದೇಶಿ ಹೂಡಿಕೆದಾರರು ಜೂನ್ ತ್ರೈಮಾಸಿಕದಲ್ಲಿ ಭಾರತೀಯ ಷೇರು ಮಾರುಕಟ್ಟೆಯ ಮೇಲೆ 10 ಬಿಲಿಯನ್ ಡಾಲರ್ ಅನ್ನು ಹೂಡಿಕೆ ಮಾಡಿದ್ದಾರೆ. ಡಿಸೆಂಬರ್ 2020ರ ಬಳಿಕದ ಅತೀ ಅಧಿಕ ಹೂಡಿಕೆ ಇದಾಗಿದೆ. ದೃಢವಾದ ಗಳಿಕೆಯ ಬೆಳವಣಿಗೆ ಕಾರಣದಿಂದಾಗಿ ಮಾರುಕಟ್ಟೆಯ ಬೆಳವಣಿಗೆ ಉತ್ತಮವಾಗಿದೆ. "ವಿದೇಶಿ ಹೂಡಿಕೆಗಳ ವಿಚಾರಕ್ಕೆ ಬಂದಾಗ ಭಾರತವು ಅತೀ ಉತ್ತಮವಾದ ಆಕರ್ಷಕ ತಾಣವಾಗಿದೆ," ಎಂದು ಎಯುಎಂ ಕ್ಯಾಪಿಟಲ್ ಮಾರ್ಕೆಟ್‌ನ ಮುಖೇಶ್ ಕೊಚಾರ್ ತಿಳಿಸಿದ್ದಾರೆ.
"ಚೀನಾ, ಕೊರಿಯಾ ಅಥವಾ ತೈವಾನ್‌ನಂತಹ ತನ್ನ ಮಾರುಕಟ್ಟೆಯ ಆರ್ಥಿಕತೆಗೆ ನಾವು ಹೋಲಿಕೆ ಮಾಡಿದಾಗ ಭಾರತವು ವಿದೇಶಿ ಹೂಡಿಕೆಗೆ ಆಕರ್ಷಕ ಸ್ಥಾನವಾಗಿ ಮುಂದುವರಿಯಲಿದೆ ಎಂಬ ನಂಬಿಕೆ ನಾವು ಹೊಂದಿದ್ದೇವೆ. ಈ ಆರ್ಥಿಕತೆಗಳು ಮಾಲಿನ್ಯ, ಭೌಗೋಳಿಕ-ರಾಜಕೀಯ ಅಪಾಯ ಮುಂತಾದ ತಮ್ಮದೇ ಆದ ಸವಾಲುಗಳನ್ನು ಹೊಂದಿವೆ. ಈ ಸಮಯದಲ್ಲಿ ಅತ್ಯಂತ ಕಡಿಮೆ ಶೇಕಡವಾರು ಭಾರತೀಯರು ಷೇರು ಮಾರುಕಟ್ಟೆಯಲ್ಲಿ ಅಥವಾ ಹಣಕಾಸು ಹೂಡಿಕೆದಾರರಾಗಿದ್ದಾರೆ," ಎಂದು ಮುಖೇಶ್ ಕೊಚಾರ್ ಹೇಳಿದ್ದಾರೆ.
"ಭಾರತೀಯ ಹೂಡಿಕೆದಾರರ ಪ್ರಮಾಣವು ಹೆಚ್ಚಳವಾಗಲಿದೆ. ಭವಿಷ್ಯದಲ್ಲಿ ಬರಬಹುದಾದ ರಿಟೇಲ್ ಹಣವು ಕಲ್ಪನೆಗೆ ನಿಲುಕ್ಕದ್ದು. ಆದ್ದರಿಂದಾಗಿ ನಾವು ದೀರ್ಘಾವಧಿಯಲ್ಲಿ ಷೇರು ಮಾರುಕಟ್ಟೆಯಲ್ಲಿ ಗೂಳಿಯಾಟವನ್ನು ಕಾಣಬಹುದಾಗಿದೆ. ಮಾರುಕಟ್ಟೆಯಲ್ಲಿ ಇನ್ನೂ ದೊಡ್ಡ ಪ್ರಮಾಣದ ಅವಕಾಶಗಳಿದೆ. ಹೂಡಿಕೆದಾರರು ಮಾರುಕಟ್ಟೆಯ ಸಮಯಕ್ಕಿಂತ ಅಧಿಕವಾಗಿ ಆಸ್ತಿ ಹಂಚಿಕೆಯ ಮೇಲೆ ಕೇಂದ್ರಿಕರಿಸಬೇಕು. ದೀರ್ಘಾವಧಿಯಲ್ಲಿ ಉತ್ತಮ ಲಾಭ ಉಂಟಾಗಬಹುದು," ಎಂದು ತಿಳಿಸಿದ್ದಾರೆ.
ಆರ್‌ಬಿಐನ ರೆಪೋ ದರ ಏರಿಕೆ ಅಂತ್ಯ
ಭಾರತೀಯ ರಿಸರ್ವ್ ಬ್ಯಾಂಕ್ ಹಣದುಬ್ಬರವನ್ನು ಸತತ ಎರಡನೇ ಬಾರಿಗೆ ಸ್ಥಿರವಾಗಿರಿಸಿದೆ. ಒಟ್ಟಾಗಿ ಆರು ಬಾರಿ ಕೇಂದ್ರ ಬ್ಯಾಂಕ್ ರೆಪೋ ದರವನ್ನು ಏರಿಕೆ ಮಾಡಿದೆ. ಅದಾದ ಬಳಿಕ ಸ್ಥಿರವಾಗಿರಿಸಿದೆ. ಇದು ಕೂಡಾ ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಉಂಟು ಮಾಡಿದೆ. ಒಟ್ಟಾಗಿ 250 ಮೂಲಾಂಕ ರೆಪೋ ದರವನ್ನು ಹೆಚ್ಚಳ ಮಾಡಲಾಗಿದೆ.


Click it and Unblock the Notifications