For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ 1,000 ಪಾಯಿಂಟ್ಸ್‌ ಜಿಗಿತ: ನಿಫ್ಟಿ 274 ಪಾಯಿಂಟ್ಸ್‌ ಏರಿಕೆ

|

ಭಾರತೀಯ ಷೇರುಪೇಟೆಯು ಬುಧವಾರ ಭರ್ಜರಿಯಾಗಿ ಕಂಬ್ಯಾಕ್ ಮಾಡಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 1000 ಪಾಯಿಂಟ್ಸ್‌ ಜಿಗಿತ ಸಾಧಿಸಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 274 ಪಾಯಿಂಟ್ಸ್ ಏರಿಕೆ ಕಂಡಿದೆ.

ಇಂದು ತಾಂತ್ರಿಕ ತೊಂದರೆಯಿಂದಾಗಿ ಎನ್‌ಎಸ್‌ಇ ಸ್ಥಗಿತಗೊಂಡ ಬಳಿಕ ಮಧ್ಯಾಹ್ನ 3.30ಕ್ಕೆ ಪುನಾರಂಭಗೊಂಡಿತು. ಇದರ ಜೊತೆಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಕೂಡ ಪುನಾರಂಭಗೊಂಡು ಸಂಜೆ 5 ಗಂಟೆಗೆ ಅಂತ್ಯಗೊಂಡಿತು.

ಷೇರುಪೇಟೆ ಚೇತರಿಕೆ: ಸೆನ್ಸೆಕ್ಸ್ 1,000 ಪಾಯಿಂಟ್ಸ್‌ ಜಿಗಿತ

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 2.07ರಷ್ಟು ಅಥವಾ 1,030 ಪಾಯಿಂಟ್ಸ್ ಏರಿಕೆಗೊಂಡು 50,781.69 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 1.86ರಷ್ಟು ಅಥವಾ 274 ಪಾಯಿಂಟ್ಸ್ ಹೆಚ್ಚಳಗೊಂಡು 14,982 ಪಾಯಿಂಟ್ಸ್‌ಗೆ ಜಿಗಿದಿದೆ.

ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇ 0.77 ಮತ್ತು ಶೇಕಡಾ 1.08 ರಷ್ಟು ಹೆಚ್ಚಾಗಿದೆ. ನಿಫ್ಟಿ ಬ್ಯಾಂಕ್ ಮತ್ತು ಖಾಸಗಿ ಬ್ಯಾಂಕ್ ಸೂಚ್ಯಂಕಗಳು ತಲಾ 4 ಪ್ರತಿಶತದಷ್ಟು ಏರಿದರೆ, ನಿಫ್ಟಿ ಪಿಎಸ್‌ಯು ಬ್ಯಾಂಕ್ ಸೂಚ್ಯಂಕವು 3 ಪ್ರತಿಶತದಷ್ಟು ಜಿಗಿದಿದೆ.

English summary

Sensex Jumps 1030 Points: Nifty Settles Above 14,950

Sensex closed 1030 points, o​r 2.07 percent, higher at 50,781.69 while Nifty jumped 274 points or 1.86 percent to 14,982.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X