51,000 ಗಡಿದಾಟಿದ ಸೆನ್ಸೆಕ್ಸ್, ನಿಫ್ಟಿ ಕೂಡ ಮತ್ತಷ್ಟು ಜಿಗಿತ

ಭಾರತೀಯ ಷೇರುಪೇಟೆ ಬುಧವಾರ ಭಾರೀ ಚೇತರಿಕೆಗೊಂಡ ಬಳಿಕ ಗುರುವಾರ ಮತ್ತಷ್ಟು ಎತ್ತರಕ್ಕೆ ಜಿಗಿತ ಸಾಧಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 257 ಪಾಯಿಂಟ್ಸ್ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 15,100ರ ಗಡಿ ದಾಟಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ ಶೇಕಡಾ 0.51ರಷ್ಟು ಅಥವಾ 257.62 ಪಾಯಿಂಟ್ಸ್‌ ಏರಿಕೆಗೊಂಡು, 51,039.31 ಸೂಚ್ಯಂಕಗಳನ್ನು ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 115.40 ಪಾಯಿಂಟ್ಸ್‌ ಅಥವಾ ಶೇಕಡಾ 0.77ರಷ್ಟು ಏರಿಕೆಗೊಂಡು 15,097.40 ಪಾಯಿಂಟ್ಸ್‌ಗೆ ತಲುಪಿದೆ.

51,000 ಗಡಿದಾಟಿದ ಸೆನ್ಸೆಕ್ಸ್, ನಿಫ್ಟಿ ಕೂಡ ಮತ್ತಷ್ಟು ಜಿಗಿತ

ಇಂದು 1755 ಷೇರುಗಳು ಏರಿಕೆಗೊಂಡರೆ, 1149 ಷೇರುಗಳು ಕುಸಿದಿದ್ದು, ಮತ್ತು 169 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಕೋಲ್ ಇಂಡಿಯಾ, ಯುಪಿಎಲ್, ಅದಾನಿ ಪೋರ್ಟ್ಸ್, ಹಿಂಡಾಲ್ಕೊ ಇಂಡಸ್ಟ್ರೀಸ್ ಮತ್ತು ಬಿಪಿಸಿಎಲ್ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಐಸಿಐಸಿಐ ಬ್ಯಾಂಕ್, ನೆಸ್ಲೆ, ಎಲ್ ಅಂಡ್ ಟಿ, ಡಿವಿಸ್ ಲ್ಯಾಬ್ಸ್ ಮತ್ತು ಟೈಟಾನ್ ನಷ್ಟ ಅನುಭವಿಸಿದೆ.

ಎಫ್‌ಎಂಸಿಜಿಯನ್ನು ಹೊರತುಪಡಿಸಿ, ಇತರ ವಲಯ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ವಹಿವಾಟು ನಡೆಸುತ್ತಿದ್ದು, ಲೋಹದ ಸೂಚ್ಯಂಕವು 4 ಪ್ರತಿಶತ ಮತ್ತು ಶಕ್ತಿ ಸೂಚ್ಯಂಕವು 3 ಪ್ರತಿಶತದಷ್ಟು ಹೆಚ್ಚಾಗಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತಲಾ 1 ಪ್ರತಿಶತದಷ್ಟು ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+