For Quick Alerts
ALLOW NOTIFICATIONS  
For Daily Alerts

ಷೇರುಪೇಟೆ: ಸೆನ್ಸೆಕ್ಸ್ 520 ಪಾಯಿಂಟ್ಸ್ ಜಿಗಿತ, ನಿಫ್ಟಿ 176 ಪಾಯಿಂಟ್ಸ್ ಏರಿಕೆ

|

ಭಾರತೀಯ ಷೇರುಪೇಟೆ ಗುರುವಾರ ಭರ್ಜರಿಯಾಗಿ ಏರಿಕೆಗೊಂಡಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 520 ಪಾಯಿಂಟ್ಸ್ ಹೆಚ್ಚಾದರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 176 ಪಾಯಿಂಟ್ಸ್‌ ಹೆಚ್ಚಾಗಿದೆ.

 

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ ಶೇಕಡಾ 1.05ರಷ್ಟು ಅಥವಾ 520.68 ಪಾಯಿಂಟ್ಸ್ ಹೆಚ್ಚಳಗೊಂಡು 50,029.83 ಹಂತವನ್ನು ತಲುಪಿದರೆ, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 1.20ರಷ್ಟು ಅಥವಾ 176.70 ಪಾಯಿಂಟ್ಸ್‌ ಏರಿಕೆಗೊಂಡು 14,867.40 ಪಾಯಿಂಟ್ಸ್‌ ತಲುಪಿದೆ. ಇಂದು 2120 ಷೇರುಗಳು ಏರಿಕೆಗೊಂಡರೆ, 727 ಷೇರುಗಳು ಕುಸಿತಗೊಂಡಿವೆ ಮತ್ತು 143 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

 
ಸೆನ್ಸೆಕ್ಸ್ 520 ಪಾಯಿಂಟ್ಸ್ ಜಿಗಿತ, ನಿಫ್ಟಿ 176 ಪಾಯಿಂಟ್ಸ್ ಏರಿಕೆ

ಜೆಎಸ್‌ಡಬ್ಲ್ಯು ಸ್ಟೀಲ್, ಹಿಂಡಾಲ್ಕೊ, ಟಾಟಾ ಸ್ಟೀಲ್, ಅದಾನಿ ಪೋರ್ಟ್ಸ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ನಿಫ್ಟಿಯಲ್ಲಿ ಪ್ರಮುಖವಾಗಿ ನಷ್ಟ ಅನುಭವಿಸಿದ ಷೇರುಗಳಾಗಿದ್ದು, ಎಚ್‌ಯುಎಲ್, ಎಚ್‌ಡಿಎಫ್‌ಸಿ ಲೈಫ್, ನೆಸ್ಲೆ, ಟಿಸಿಎಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಲಾಭ ಗಳಿಸಿದ ಷೇರುಗಳಾಗಿವೆ.

ಎಫ್‌ಎಂಸಿಜಿಯನ್ನು ಹೊರತುಪಡಿಸಿ, ಇತರ ಎಲ್ಲಾ ವಲಯ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಕೊನೆಗೊಂಡಿದ್ದು, ನಿಫ್ಟಿ ಮೆಟಲ್ ಸೂಚ್ಯಂಕವು ಶೇಕಡಾ 5ರಷ್ಟು ಮತ್ತು ಪಿಎಸ್‌ಯು ಬ್ಯಾಂಕ್ ಸೂಚ್ಯಂಕವು ಶೇಕಡಾ 2.6ರಷ್ಟು ಹೆಚ್ಚಾಗಿದೆ.

English summary

Sensex Jumps 520 Points: Nifty Ends Above 14,850

Sensex was up 520.68 points or 1.05% at 50,029.83, and the Nifty was up 176.70 points or 1.20% at 14,867.40.
Story first published: Thursday, April 1, 2021, 16:24 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X