Closing Bell: ಸೆನ್ಸೆಕ್ಸ್‌ 613 ಪಾಯಿಂಟ್ಸ್‌ ಏರಿಕೆ, ನಿಫ್ಟಿ 15100 ಮಟ್ಟಕ್ಕಿಂತ ಹೆಚ್ಚಳ

ಭಾರತೀಯ ಷೇರುಪೇಟೆ ಮಂಗಳವಾರ ಸಕಾರಾತ್ಮಕವಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 613 ಪಾಯಿಂಟ್ಸ್‌ ಏರಿಕೆಗೊಂಡರೆ, ನಿಫ್ಟಿ 15100 ಮಟ್ಟಕ್ಕಿಂತ ಹೆಚ್ಚಳಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ ಶೇಕಡಾ 1.24ರಷ್ಟು ಅಥವಾ 613 ಪಾಯಿಂಟ್ಸ್‌ ಏರಿಕೆಗೊಂಡು 50193 ಪಾಯಿಂಟ್ಸ್‌ ತಲುಪಿದರೆ, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 1.24ರಷ್ಟು ಅಥವಾ 184.95 ಪಾಯಿಂಟ್ಸ್‌ ಹೆಚ್ಚಳಗೊಂಡು 15,108ಕ್ಕೆ ಮುಕ್ತಾಯಗೊಂಡಿದೆ.

ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇಕಡಾ 1.87 ಮತ್ತು 1.28 ರಷ್ಟು ಹೆಚ್ಚಾಗಿದೆ.

ಸೆನ್ಸೆಕ್ಸ್‌ 613 ಪಾಯಿಂಟ್ಸ್‌ ಏರಿಕೆ, ಮತ್ತೆ 50 ಸಾವಿರ ಗಡಿದಾಟಿದೆ

ಏರಿಕೆಗೊಂಡ ಷೇರುಗಳು:
ಮಹೀಂದ್ರಾ ಮತ್ತು ಮಹೀಂದ್ರಾ ಷೇರುಗಳು 44 ರೂ.ಗಳ ಏರಿಕೆ ಕಂಡು 797.70 ರೂ., ಬಜಾಜ್ ಆಟೋ ಷೇರುಗಳು 203 ರೂ.ಗಳ ಏರಿಕೆ ಕಂಡು 4,067.20 ರೂ., ಟೈಟಾನ್ ಕಂಪೆನಿಯ ಷೇರು ಸುಮಾರು 71 ರೂ.ಗಳ ಏರಿಕೆ ಕಂಡು 1,539.25 ರೂ., ಬಜಾಜ್ ಫೈನಾನ್ಸ್ ಷೇರುಗಳು ಸುಮಾರು 259 ರೂ.ಗಳ ಏರಿಕೆ ಕಂಡು 5,688.75 ರೂ., ಟಾಟಾ ಮೋಟಾರ್ಸ್ ಷೇರುಗಳು ಸುಮಾರು 11 ರೂ.ಗಳ ಏರಿಕೆ ಕಂಡು 332.45 ರೂ. ತಲುಪಿದೆ.

ಇಳಿಕೆಗೊಂಡ ಷೇರುಗಳು:
ಭಾರ್ತಿ ಏರ್‌ಟೆಲ್‌ನ ಷೇರು 13 ರೂ.ಗಳ ಕುಸಿತದೊಂದಿಗೆ 536.35 ರೂ, ಆರ್‌ಎಟಿಸಿಯ ಷೇರುಗಳು ಸುಮಾರು 3 ರೂ.ಗಳಷ್ಟು ಇಳಿಕೆಯಾಗಿ 210.05 ರೂ., ಕೋಲ್ ಇಂಡಿಯಾ ಷೇರುಗಳು ಸುಮಾರು 2 ರೂ. ಕಳೆದುಕೊಂಡು 146.45 ರೂ.ಗೆ ತಲುಪಿದೆ. ಡಾ. ರೆಡ್ಡಿಸ್ ಲ್ಯಾಬ್‌ನ ಷೇರುಗಳು 35 ರೂ. ಕುಸಿದು ಸುಮಾರು 5,215.45 ರೂ., ದೇವಿ ಲ್ಯಾಬ್ ಷೇರುಗಳು 19 ರೂ ಕುಸಿದು 4,023.95 ರೂಪಾಯಿಗಳಿಗೆ ಕೊನೆಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+