For Quick Alerts
ALLOW NOTIFICATIONS  
For Daily Alerts

ಷೇರುಪೇಟೆ: ಸೆನ್ಸೆಕ್ಸ್ 400 ಪಾಯಿಂಟ್ಸ್‌ ಏರಿಕೆ, 15 ಸಾವಿರ ಗಡಿಗೆ ಮರಳಿದ ನಿಫ್ಟಿ

|

ಭಾರತೀಯ ಷೇರುಪೇಟೆಯು ಸೋಮವಾರ ಕುಸಿತದ ಬಳಿಕ ಇಂದು (ಮಾರ್ಚ್ 16) ಮಂಗಳವಾರ ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 213.34 ಪಾಯಿಂಟ್‌ ಏರಿಕೆಗೊಂಡು, ರಾಷ್ಟ್ರೀಯ ಷೇರುಪೇಟೆ 74.40 ಪಾಯಿಂಟ್‌ಗಳ ಲಾಭದೊಂದಿಗೆ ತೆರೆದಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 213.34 ಪಾಯಿಂಟ್‌ ಹೆಚ್ಚಾಗಿ 50608.42 ಮಟ್ಟದಲ್ಲಿ ಪ್ರಾರಂಭವಾಯಿತು. ಅದೇ ಸಮಯದಲ್ಲಿ, ಎನ್ಎಸ್ಇ ನಿಫ್ಟಿ 15003.90 ಮಟ್ಟದಲ್ಲಿ ತೆರೆಯಿತು.
ಇಂದು ಬಿಎಸ್ಇಯಲ್ಲಿ ಒಟ್ಟು 959 ಕಂಪನಿಗಳಲ್ಲಿ ವಹಿವಾಟು ಪ್ರಾರಂಭಿಸಿತು, ಅದರಲ್ಲಿ ಸುಮಾರು 668 ಷೇರುಗಳು ಏರಿಕೆಗೊಂಡರೆ, 234 ಷೇರುಗಳು ಇಳಿಕೆಗೊಂಡಿವೆ. ಅದೇ ಸಮಯದಲ್ಲಿ, 57 ಕಂಪನಿಗಳ ಷೇರು ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಷೇರುಪೇಟೆ: ಸೆನ್ಸೆಕ್ಸ್ 400 ಪಾಯಿಂಟ್ಸ್‌ ಏರಿಕೆ

ಬೆಳಿಗ್ಗೆ 10.40 ರ ಸುಮಾರಿಗೆ ಸೆನ್ಸೆಕ್ಸ್ 458 ಪಾಯಿಂಟ್ಸ್ ಏರಿಕೆಗೊಂಡರೆ, ನಿಫ್ಟಿ 118 ಪಾಯಿಂಟ್ಸ್ ಹೆಚ್ಚಳಗೊಂಡಿದೆ.

ಅದಾನಿ ಪೋರ್ಟ್ಸ್‌ ಷೇರುಗಳು ಸುಮಾರು 12 ರೂ.ಗಳ ಏರಿಕೆ ಕಂಡು 731.50 ರೂ., ಅಲ್ಟ್ರಾಟೆಕ್ ಸಿಮೆಂಟ್‌ನ ಷೇರುಗಳು ಸುಮಾರು 98 ರೂ.ಗಳಿಂದ 6,659.90 ರೂ., ಟೈಟಾನ್ ಕಂಪನಿಯ ಷೇರುಗಳು 1,515.85 ರೂ.ಗಳಲ್ಲಿ ಪ್ರಾರಂಭವಾಗಿದ್ದು, ಏಷ್ಯನ್ ಪೇಂಟ್ಸ್ ಷೇರುಗಳು 35 ರೂ.ಗಳಿಂದ 2,389.55 ರೂ., ಭಾರ್ತಿ ಏರ್‌ಟೆಲ್‌ನ ಷೇರು ಸುಮಾರು 6 ರೂ ಗಳಿಸಿ 529.25 ರೂ.ಗೆ ತೆರೆಯಿತು.

ಇದೇ ವೇಳೆಯಲ್ಲಿ ಹಿಂಡಾಲ್ಕೊ ಷೇರುಗಳು ಸುಮಾರು 4 ರೂ.ಗಳ ಇಳಿಕೆಯಾಗಿ 330.00 ರೂ.ಗೆ ಪ್ರಾರಂಭವಾಯಿತು. ಟಾಟಾ ಸ್ಟೀಲ್ ಷೇರುಗಳು ಸುಮಾರು 4 ರೂ.ಗಳ ಕುಸಿತ ಕಂಡು 732.80 ರೂ., ಟೆಕ್ ಮಹೀಂದ್ರಾ ಷೇರುಗಳು ಸುಮಾರು 3 ರೂ.ಗಳನ್ನು ಕಳೆದುಕೊಂಡು 1,024.00 ರೂ., ಬಿಪಿಸಿಎಲ್ ಷೇರುಗಳು ಸುಮಾರು 2 ರೂ.ಗಳ ಕುಸಿತ ಕಂಡು 458.95 ರೂ. ತಲುಪಿದೆ.

English summary

Sensex Jumps Above 50650: Nifty Reclaims 15000

BSE Sensex was hovering around 50,600, while the broader Nifty 50 index reclaimed the crucial 15,000-mark.
Story first published: Tuesday, March 16, 2021, 10:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X