ಷೇರುಪೇಟೆಯಲ್ಲಿ ಗೂಳಿ ಗುಟುರು: ಸೆನ್ಸೆಕ್ಸ್ 1,100 ಪಾಯಿಂಟ್ಸ್ ಏರಿಕೆ

ಭಾರತೀಯ ಷೇರುಪೇಟೆಯು ಮಂಗಳವಾರ ಭರ್ಜರಿ ಓಟ ಕಂಡಿದ್ದು, ಹೂಡಿಕೆದಾರರು ಸಾಕಷ್ಟು ಖುಷಿಗೊಂಡಿದ್ದಾರೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಬರೋಬ್ಬರಿ 1,128 ಪಾಯಿಂಟ್ಸ್ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 337 ಪಾಯಿಂಟ್ಸ್‌ ಜಿಗಿತ ಕಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 2.30ರಷ್ಟು ಅಥವಾ 1,128.08 ಪಾಯಿಂಟ್ಸ್‌ ಹೆಚ್ಚಾಗಿ 50,138.58 ಪಾಯಿಂಟ್ಸ್‌ಗೆ ತಲುಪಿದರೆ, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 2.33ರಷ್ಟು ಅಥವಾ 337.80 ಪಾಯಿಂಟ್ಸ್‌ ಏರಿಕೆಗೊಂಡು 14,845.10 ಪಾಯಿಂಟ್ಸ್‌ಗೆ ತಲುಪಿದೆ. ಇಂದು 1,529 ಷೇರುಗಳು ಏರಿಕೆಗೊಂಡರೆ, 1,386 ಷೇರುಗಳು ಕುಸಿದಿವೆ ಮತ್ತು 197 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಷೇರುಪೇಟೆಯಲ್ಲಿ ಗೂಳಿ ಗುಟುರು: ಸೆನ್ಸೆಕ್ಸ್ 1,100 ಪಾಯಿಂಟ್ಸ್ ಏರಿಕೆ

ಯುಪಿಎಲ್, ಜೆಎಸ್‌ಡಬ್ಲ್ಯೂ ಸ್ಟೀಲ್, ಎಚ್‌ಡಿಎಫ್‌ಸಿ ಬ್ಯಾಂಕ್, ಟಾಟಾ ಸ್ಟೀಲ್ ಮತ್ತು ಎಚ್‌ಸಿಎಲ್ ಟೆಕ್ನಾಲಜೀಸ್ ನಿಫ್ಟಿಯಲ್ಲಿ ಪ್ರಮುಖವಾಗಿ ಲಾಭ ಗಳಿಸಿದರೆ, ಆಕ್ಸಿಸ್ ಬ್ಯಾಂಕ್, ಎಂ ಅಂಡ್ ಎಂ, ಹಿಂಡಾಲ್ಕೊ ಇಂಡಸ್ಟ್ರೀಸ್, ಭಾರ್ತಿ ಏರ್‌ಟೆಲ್ ಮತ್ತು ಎಸ್‌ಬಿಐ ಲೈಫ್ ಇನ್ಶುರೆನ್ಸ್ ನಷ್ಟವನ್ನು ಅನುಭವಿಸಿವೆ.

ಐಟಿ, ಎಫ್‌ಎಂಸಿಜಿ, ಮೆಟಲ್ ಮತ್ತು ಫಾರ್ಮಾ ಷೇರುಗಳಲ್ಲಿ ಖರೀದಿಯೊಂದಿಗೆ ಬೆಂಚ್‌ಮಾರ್ಕ್ ಸೂಚ್ಯಂಕಗಳು ಸತತ ಎರಡನೇ ದಿನವೂ ಹೆಚ್ಚಾಗಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತಲಾ ಒಂದು ಶೇಕಡಾವನ್ನು ಸೇರಿಸಿದವು.

ಭಾರತೀಯ ರೂಪಾಯಿ ಆರಂಭಿಕ ನಷ್ಟವನ್ನು ವಿಸ್ತರಿಸಿದ್ದು, ದಿನದ ಕನಿಷ್ಠ ಮಟ್ಟಕ್ಕೆ ಪ್ರತಿ ಡಾಲರ್‌ಗೆ 73.38 ಕ್ಕೆ ಕೊನೆಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+