For Quick Alerts
ALLOW NOTIFICATIONS  
For Daily Alerts

Closing Bell: ಕುಸಿದಿದ್ದ ಸೆನ್ಸೆಕ್ಸ್‌, ನಿಫ್ಟಿ ಕೊಂಚ ಚೇತರಿಕೆ

|

ಸೋಮವಾರ ಭಾರೀ ಕುಸಿತಕ್ಕೆ ಸಾಕ್ಷಿಯಾಗಿದ್ದ ಭಾರತೀಯ ಷೇರುಪೇಟೆ ಮಂಗಳವಾರ ಏರಿಳಿತದೊಂದಿಗೆ ಸಮತಟ್ಟಾಗಿ ಮುಂದುವರಿದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 7.09 ಪಾಯಿಂಟ್ ಅಥವಾ ಶೇಕಡಾ 0.01ರಷ್ಟು ಏರಿಕೆಗೊಂಡು 49,751.41 ಪಾಯಿಂಟ್ಸ್‌ ತಲುಪಿದೆ.

ರಾಷ್ಟ್ರೀಯ ಷೇರುಪೇಟೆ ನಿಫ್ಟಿ 32.10 ಪಾಯಿಂಟ್ ಅಥವಾ ಶೇಕಡಾ 0.22ರಷ್ಟು ಏರಿಕೆಗೊಂಡು 14,707.80 ಪಾಯಿಂಟ್ಸ್‌ಗೆ ತಲುಪಿದೆ. ಇಂದು ಸುಮಾರು 1657 ಷೇರುಗಳು ಏರಿಕೆಗೊಂಡರೆ, 1213 ಷೇರುಗಳು ಕುಸಿದವು ಮತ್ತು 158 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

Closing Bell: ಕುಸಿದಿದ್ದ ಸೆನ್ಸೆಕ್ಸ್‌, ನಿಫ್ಟಿ ಕೊಂಚ ಚೇತರಿಕೆ

ಇಂದು ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಒಎನ್‌ಜಿಸಿ, ಹಿಂಡಾಲ್ಕೊ ಇಂಡಸ್ಟ್ರೀಸ್ ಮತ್ತು ಯುಪಿಎಲ್ ಪ್ರಮುಖ ಲಾಭ ಗಳಿಸಿದ ಕಂಪನಿಗಳಾಗಿದ್ದು, ಕೋಟಕ್ ಮಹೀಂದ್ರಾ ಬ್ಯಾಂಕ್, ಮಾರುತಿ ಸುಜುಕಿ, ಬಜಾಜ್ ಆಟೋ, ಅದಾನಿ ಪೋರ್ಟ್ಸ್ ಮತ್ತು ಡಿವಿಸ್ ಲ್ಯಾಬ್ಸ್ ನಷ್ಟ ಅನುಭವಿಸಿದೆ.

ನಿಫ್ಟಿ ಮೆಟಲ್ ಸೂಚ್ಯಂಕವು ಸುಮಾರು 4 ಪ್ರತಿಶತದಷ್ಟು ಏರಿಕೆಯಾದರೆ, ಪವರ್ ಮತ್ತು ಇನ್ಫ್ರಾ ಸೂಚ್ಯಂಕಗಳು ಶೇಕಡಾ 1 ರಿಂದ 2 ರಷ್ಟು ಹೆಚ್ಚಾಗಿವೆ. ಆದಾಗ್ಯೂ, ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಶೇಕಡಾ 0.7-1 ರಷ್ಟು ಏರಿಕೆಯಾಗಿದೆ.

ದೇಶೀಯ ಈಕ್ವಿಟಿ ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿ ಮೌಲ್ಯವು ಪ್ರತಿ ಡಾಲರ್‌ಗೆ 72.46 ರೂಪಾಯಿಗೆ ಕೊನೆಗೊಂಡಿತು.

English summary

Sensex, Nifty End Flat Amid High Volatility

Sensex was up 7.09 points or 0.01% at 49,751.41, and the Nifty was up 32.10 points or 0.22% at 14,707.80.
Story first published: Tuesday, February 23, 2021, 17:00 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X