ಮತ್ತೆ ಕುಸಿತ ಕಂಡ ಭಾರತೀಯ ಷೇರು ಮಾರುಕಟ್ಟೆ

ಮುಂಬೈ, ನವೆಂಬರ್ 09: ಕಳೆದ ಎರಡು ದಿನಗಳಿಂದ ಚೇತರಿಕೆ ಕಂಡಿದ್ದ ಭಾರತೀಯ ಷೇರು ಮಾರುಕಟ್ಟೆಯು ಮಂಗಳವಾರ ಮತ್ತೆ ಕುಸಿತ ಕಂಡಿದೆ.

ನಿಫ್ಟಿ ಹಾಗೂ ಸೆನ್ಸೆಕ್ಸ್ ಮಾರುಕಟ್ಟೆ ಎರಡರಲ್ಲೂ ಮಂಗಳವಾರದ ವ್ಯವಹಾರದಲ್ಲಿ ಅಲ್ಪ ಮಟ್ಟಿನ ಕುಸಿತವಾಗಿದೆ. ದಿನದಂತ್ಯದ ವಹಿವಾಟಿಗೆ ಸೆನ್ಸೆಕ್ಸ್‌ನಲ್ಲಿ 112.16 ಅಂಕ ಕುಸಿತವಾಗಿ, 60,433.45 ಸೂಚ್ಯಂಕಕ್ಕೆ ಬಂದು ತಲುಪಿದೆ ಅಂದರೆ ದಿನದಲ್ಲಿ ಶೇ.0.19ರಷ್ಟು ಕುಸಿತವಾಗಿದೆ.

ಇನ್ನು ನಿಫ್ಟಿಯಲ್ಲಿ ಅಲ್ಪ ಮಟ್ಟಿನ ಕುಸಿತ ಕಂಡಿದ್ದು, 24.3 ಅಂಕ ಇಳಿಕೆಯೊಂದಿಗೆ 18,044.25 ಸೂಚ್ಯಂಕಕ್ಕೆ ಬಂದು ತಲುಪಿದೆ ಅಂದರೆ ಇವತ್ತಿನ ವ್ಯವಹಾರದಲ್ಲಿ ಶೇ.0.13ರಷ್ಟು ಇಳಿಕೆಯಾಗಿದೆ.

ಮತ್ತೆ ಕುಸಿತ ಕಂಡ ಭಾರತೀಯ ಷೇರು ಮಾರುಕಟ್ಟೆ

ನಿಫ್ಟಿ ಬ್ಯಾಂಕ್ ಸೂಚ್ಯಂಕದಲ್ಲೂ ಕೂಡ ಇಂದು ಇಳಿಕೆಯಾಗಿದ್ದು, 69.45 ಇಳಿಕೆಯೊಂದಿಗೆ 39, 368.80 ಸೂಚ್ಯಂಕಕ್ಕೆ ಬಂದು ತಲುಪಿದೆ. ಇಂದಿನ ವಹಿವಾಟಿನಲ್ಲಿ 0.18ರಷ್ಟು ಇಳಕೆ ಕಂಡಿದೆ.

ಇಂದು ಎಚ್‌ಡಿಎಫ್‌ಸಿ, ಬಜಾಜ್ ಫಿನಾನ್ಸ್‌, ಕೋಟಕ್ ಮಹಿಂದ್ರಾ ಬ್ಯಾಂಕ್, ಮಾರುತಿ ಸುಜೂಕಿ, ಆಕ್ಸಿಸ್ ಬ್ಯಾಂಕ್ ಎಚ್‌ಸಿಎಲ್ ಟೆಕ್ನಾಲಜಿ ಸೆನ್ಸೆಕ್ಸ್‌ನಲ್ಲಿ ಕುಸಿತವಾಗಿದೆ. ಒಂದು ಹಂತದಲ್ಲಿ 332 ಸೂಚ್ಯಂಕದವರೆಗೂ ಕುಸಿತವಾಗಿತ್ತು, ನಿಫ್ಟಿ ಮಾರುಕಟ್ಟೆಯು 18 ಸಾವಿರದ ಅಂಕವನ್ನು ಹೀಗೆ ಉಳಿಸಿಕೊಂಡು ಹೋದರೆ ಮಾರುಕಟ್ಟೆಯಲ್ಲಿ ಒಂದು ಧನಾತ್ಮಕ ಆಶಾಭಾವನೆ ಇರುತ್ತದೆ ಎಂದು ಕ್ಯಾಪಿಟಲ್ ಗ್ಲೋಬಲ್ ರಿಸರ್ಚ್‌ನ ವಿಜಯ್ ಧನೋಟಿಯಾ ಹೇಳಿದ್ದಾರೆ.

ಗ್ಯಾಸ್, ಆಯಿಲ್, ಸಾರ್ವಜನಿಕ ಸಂಸ್ಥೆಯ ಬ್ಯಾಂಕ್‌ಗಳು, ಆಟೋ ಮತ್ತು ಹೆಲ್ತ್‌ಕೇರ್‌ನ ಷೇರುಗಳ ಮೌಲ್ಯ ಇಂದು ಏರಿಕೆಯಾಗಿದೆ. ಮಿಡ್ ಮತ್ತು ಸ್ಮಾಲ್‌ ಕ್ಯಾಪ್ ಷೇರುಗಳ ಮೌಲ್ಯ ಕೂಡ ಶೇ.0.4 ರಷ್ಟು ಏರಿಕೆಯಾಗಿದೆ. ಎನ್‌ಟಿಪಿಸಿ, ಮಾರುತಿ ಸುಜೂಕಿ, ಜೆಎಸ್‌ಡಬ್ಲ್ಯೂ ಸ್ಟೀಲ್, ಶ್ರೀ ಸಿಮೆಂಟ್, ಪವರ್ ಗ್ರಿಡ್ ಹಾಗೂ ಹಿಂಡಲ್ಕೋ ಷೇರು ಮೌಲ್ಯವು 1 ರಿಂದ ಶೇ.1.7ರವರೆಗೆ ಕುಸಿತವಾಗಿದೆ.
ಒಟ್ಟಾರೆ 2007 ಷೇರುಗಳು ಏರಿಕೆಯಾಗಿದ್ದರೆ, 1,304 ಷೇರುಗಳಲ್ಲಿ ಇಳಿಕೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+