ಮಂಗಳವಾರ ಸ್ವಲ್ಪ ಚೇತರಿಕೆ ಕಂಡಿದ್ದ ಷೇರುಪೇಟೆ ಮತ್ತೊಮ್ಮೆ ಶೇಕ್ ಆಗಿದೆ. ಬುಧವಾರ ಸೆನ್ಸೆಕ್ಸ್ 214.22 ಅಂಶಗಳಷ್ಟು ಕುಸಿತ ಕಂಡಿದೆ. ರಾಷ್ಟ್ರೀಯ ಷೇರುಪೇಟೆ(ಎನ್‌ಎಸ್ಇ) ಸೂಚ್ಯಂಕ ನಿಫ್ಟಿ ಕೂಡ ಇಳಿಕೆ ಸಾಧಿಸಿದೆ.
ಸೆನ್ಸೆಕ್ಸ್ 0.55 ಪರ್ಸೆಂಟ್ ಇಳಿಕೆಗೊಂಡು 38,409.48 ಪಾಯಿಂಟ್ಸ್‌ಗೆ ಮುಟ್ಟಿದೆ. ಎನ್‌ಎಸ್ಇ ಸೂಚ್ಯಂಕ ನಿಫ್ಟಿ 52.30 ಪಾಯಿಂಟ್ಸ್ ಇಳಿಕೆಗೊಂಡು 11,251.00 ಅಂಶಗಳಿಗೆ ತಲುಪಿದೆ. ಮಂಗಳವಾರ (ಮಾರ್ಚ್ 03)ರಂದು ಸೆನ್ಸೆಕ್ಸ್ 1.26 ಪರ್ಸೆಂಟ್ ಏರಿಕೆ ದಾಖಲಿಸಿತ್ತು. ನಿಫ್ಟಿ ಕೂಡ 1.53 ಪರ್ಸೆಂಟ್ ಏರಿಕೆ ಕಂಡಿತ್ತು. ಆದರೆ ಬುಧವಾರ ಷೇರುಪೇಟೆ ಮತ್ತೆ ಇಳಿಮುಖ ದಾಖಲಿಸಿದೆ.

ನಷ್ಟ ಅನುಭವಿಸಿದ ಷೇರುಗಳು:
ಯೆಸ್ ಬ್ಯಾಂಕ್, ಇಂಡಸ್‌ಲ್ಯಾಂಡ್ ಬ್ಯಾಂಕ್, ಬಜಾಜ್ ಫಿನಾನ್ಸ್, ಈಚರ್ ಮೋಟಾರ್ಸ್, ಐಟಿಸಿ, ಟಾಟಾ ಮೋಟಾರ್ಸ್, ಅಲ್ಟ್ರಾಟೆಕ್ ಸಿಮೆಂಟ್, ಹೆಚ್‌ಡಿಎಫ್‌ಸಿ ಷೇರುಗಳು 2 ಪರ್ಸೆಂಟ್‌ಗಿಂತ ಹೆಚ್ಚಿನ ನಷ್ಟ ಅನುಭವಿಸಿವೆ.
ಇನ್ನು ಸಿಪ್ಲಾ, ಡಾಕ್ಟರ್ ರೆಡ್ಡಿ ಲ್ಯಾಬ್ಸ್, ಸನ್ ಫಾರ್ಮ, ಪವರ್‌ಗ್ರಿಡ್ ಕಾರ್ಪ್, ಗೇಲ್, ಏಷ್ಯನ್ ಪೇಂಟ್ಸ್ ಟಿಸಿಎಸ್ ಷೇರುಗಳು ಲಾಭ ದಾಖಲಿಸಿವೆ.
ಕುಸಿದ ರುಪಾಯಿ ಮೌಲ್ಯ :
ಡಾಲರ್ ಎದುರು ರುಪಾಯಿ ಮೌಲ್ಯವು ಕುಸಿತ ಕಂಡಿದೆ. 0.4 ಪರ್ಸೆಂಟ್‌ನಷ್ಟು ಇಳಿಕೆ ಕಂಡ ರುಪಾಯಿ 34 ಪೈಸೆಯಷ್ಟು ನಷ್ಟ ಅನುಭವಿಸಿದೆ. ಇಂದು ಡಾಲರ್ ಎದುರು ರುಪಾಯಿ ಮೌಲ್ಯ 73.63 ರುಪಾಯಿಗೆ ಮುಟ್ಟಿದೆ.


Click it and Unblock the Notifications