ತೀವ್ರ ಏರುಮುಖದತ್ತ ಸಾಗಿದ್ದ ಭಾರತೀಯ ಷೇರುಪೇಟೆ ಮಂಗಳವಾರ ಕುಸಿತಕ್ಕೆ ಸಾಕ್ಷಿಯಾಗಿದೆ. ಮಂಗಳವಾರ ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕುಸಿದಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 49.96 ಪಾಯಿಂಟ್ ಅಥವಾ ಶೇಕಡಾ 0.10ರಷ್ಟು ಇಳಿಕೆಗೊಂಡು 52,104.17 ಪಾಯಿಂಟ್ಸ್‌ಗೆ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 1.20 ಪಾಯಿಂಟ್ ಅಥವಾ ಶೇಕಡಾ 0.01ರಷ್ಟು ಇಳಿದು 15,313.50 ಪಾಯಿಂಟ್ಸ್‌ಗೆ ಕುಸಿದಿದೆ. ಜೊತೆಗೆ ಇಂದು ಸುಮಾರು 1,354 ಷೇರುಗಳು ಮುಂದುವರೆದವು, 1,573 ಷೇರುಗಳು ಕುಸಿದವು, ಮತ್ತು 160 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಈಷರ್ ಮೋಟಾರ್ಸ್, ನೆಸ್ಲೆ ಮತ್ತು ಇನ್ಫೋಸಿಸ್ ನಿಫ್ಟಿಯಲ್ಲಿ ಪ್ರಮುಖವಾಗಿ ನಷ್ಟ ಅನುಭವಿಸಿದ ಷೇರುಗಳಾಗಿದ್ದು, ಪವರ್ ಗ್ರಿಡ್, ಒಎನ್‌ಜಿಸಿ, ಹಿಂಡಾಲ್ಕೊ, ಟಾಟಾ ಸ್ಟೀಲ್ ಮತ್ತು ಎನ್‌ಟಿಪಿಸಿ ಲಾಭಗಳಿಸಿವೆ.
ಇಂದಿನ ವಹಿವಾಟಿನಲ್ಲಿ ಐಟಿ, ಬ್ಯಾಂಕಿಂಗ್ ಮತ್ತು ಎಫ್‌ಎಂಸಿಜಿ ವಲಯಗಳಲ್ಲಿ ಮಾರಾಟಕ್ಕೆ ಸಾಕ್ಷಿಯಾಗಿದ್ದರೆ, ಲೋಹ, ಫಾರ್ಮಾ, ಇಂಧನ ಮತ್ತು ಇನ್ಫ್ರಾ ವಲಯಗಳು ನಷ್ಟಗೊಂಡವು. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಕೊನೆಗೊಂಡಿವೆ.


Click it and Unblock the Notifications